(ವಿಶೇಷ ವರದಿ)
ಕೊಪ್ಪಳ:-ಬಹುತೇಕ ಅಧಿಕಾರಿಗಳು ದಾರಿ ಇದ್ದ ಕಡೆ ಸಾಗಿ ಮರೆಯಾಗಿಬಿಡುತ್ತಾರೆ ಆದರೆ ಕೆಲವು ಅಧಿಕಾರಿಗಳು ದಾರಿ ಇಲ್ಲದ ಕಡೆ ದಾರಿ ಮಾಡಿಕೊಂಡು ಸಾಗಿ ತಮ್ಮ ಹೆಜ್ಜೆ ಗುರುತುಗಳನ್ನು ದಾಖಲಿಸಿ ಹೋಗುತ್ತಾರೆ.
ತಮ್ಮ ಕರ್ತವ್ಯ ನಿಷ್ಠೆ, ಬದ್ಧತೆ,ಶುದ್ಧತೆ,ಪ್ರಾಮಾಣಿಕತೆ ಮೂಲಕ ಪೋಲಿಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಾಗಿ ಸಾರ್ವಜನಿಕ ಸೇವೆ ಮಾಡಿ ಇಲಾಖೆಗೂ ಗೌರವ ತಂದು ಕೊಟ್ಟ ಅಧಿಕಾರಿ ಎಂದರೆ ಕೊಪ್ಪಳ ಗ್ರಾಮೀಣ ಸಿಪಿ ಆಯ್ ಶ್ರೀ ವಿಶ್ವನಾಥ ಹಿರೇಗೌಡರ ಅವರು.
ಪಿಎಸ್ ಐ ಅಧಿಕಾರಿಗಳಾಗಿ ಕುಕನೂರು,ಮುನಿರಾಬಾದ್,ಕುಷ್ಟಗಿ ಠಾಣೆಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಇಲಾಖೆ ಮತ್ತು ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.ನಶೆ ಮುಕ್ತ ಕಾರ್ಯಕ್ರಮ, ನಿಡಶೇಷಿ ಕೆರೆ,ಗಿಣಿಗೇರಿ ಕೆರೆ ಹೂಳು ಎತ್ತುವ ಕಾರ್ಯ,ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಖ್ಯ ಮಂತ್ರಿ ಪದಕಕ್ಕೂ ಭಾಜನರಾದವರು.
ಆತ್ಮೀಯತೆ, ಕ್ರಿಯಾಶೀಲತೆ, ಸರಳತೆ,ಮಾನವೀಯತೆ,ಕೊಡುಗೈ ದಾನಿ ಹೀಗೆ ಹತ್ತಾರು ವಿಶಿಷ್ಟ ಗುಣ ಹೊಂದಿ ಇತರರಿಗೂ ಸ್ಪೂರ್ತಿ ತುಂಬಿದವರು.ಇಲಾಖೆಯ ಅಧಿಕಾರಿಗಳ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಇವರನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು.
ಕಿರುಚಿತ್ರ,ಭಿತ್ತಿ ಚಿತ್ರ ಪ್ರದರ್ಶನ,ಗೀತೆಗಳ ಮೂಲಕ ಬಾಲ ಕಾರ್ಮಿಕ,ಮದ್ಯಪಾನ,ಮಟ್ಕ ಇನ್ನಿತರ ದುಷ್ಚಟಗಳ ಬಗ್ಗೆ ಜಾಗೃತಿ ಮೂಡಿಸಿದವರು.
ಹೀಗೆ ಸದಾ ತಮ್ಮ ಕಾರ್ಯಗಳ ಮೂಲಕ ಹೆಸರಾಗಿರುವ ಶ್ರೀಯುತರು ಸದ್ಯ ಗದಗ ಜಿಲ್ಲೆಗೆ ವರ್ಗಾವಣೆ ಹೊಂದಿದ್ದಾರೆ.ಅವರಿಗೆ ಕೊಪ್ಪಳ ಜನತೆಯ ಪರವಾಗಿ ಅನಂತ ಧನ್ಯವಾದಗಳು.ಹೃದಯ ಸ್ಪರ್ಶಿ ಬೀಳ್ಕೊಡುಗೆ.ಶುಭವಾಗಲಿ ಸರ್.ಇನ್ನೂ ನೂರಾರು ಕಾರ್ಯಗಳು ತಮ್ಮಿಂದ ಸಾಧ್ಯವಾಗಲಿ.ನಾಡಿನಾದ್ಯಂತ ಹೆಸರಾಗಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ದಕ್ಷ ಅಧಿಕಾರಿ ವಿಶ್ವನಾಥ ಹಿರೇಗೌಡರ ಅವರಿಗೆ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ರಾಜ್ಯ ಪ್ರಶಸ್ತಿದೊಂದಿಗೆ ಚಿನ್ನದ ಪದಕ ಪಡೆದ ಸಂದರ್ಭ
ವರದಿ-ಸಾಮಾಜಿಕ ಜಾಲಾತಾಣ ಕೃಪೆ
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ