This is the title of the web page
This is the title of the web page

Please assign a menu to the primary menu location under menu

Local News

ಎ. ೨೩ರಂದು ಯರಗಟ್ಟಿ ಪಟ್ಟಣದ ಮರಡಿ ಬಸವಣ್ಣನ ಜಾತ್ರಾ ಮಹೋತ್ಸವ


ಯರಗಟ್ಟಿ: ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರೆ ತಾಲೂಕಿನಲ್ಲೆ ತುಂಬ ಪ್ರಸಿದ್ಧ ಹಾಗೂ ಅಷ್ಟೇ ವೈಶಿಷ್ಟ್ಯಪೂರ್ಣವಾಗಿದ್ದು ರವಿವಾರ (ನ.೨೩)ದಿಂದ ಆರಂಭಗೊಳ್ಳಲಿದೆ.
ಕಲ್ಯಾಣ ಕ್ರಾಂತಿಯ ಬಳಿಕ ಚನ್ನಬಸವೇಶ್ವರರು ಶರಣರೊಂದಿಗೆ ಈ ಸ್ಥಳದಲ್ಲಿ ಲಿಂಗಾರ್ಚನೆ ಮಾಡಿಕೊಂಡು ಉಳವಿ ಕ್ಷೇತ್ರದ ಕಡೆಗೆ ಹೋಗಿದ್ದರೆಂಬ ಐತಿಹ್ಯವಿದೆ.
ಮತ್ತು ನಡೆದಾಡುವ ದೇವರು ಎಂದೇ ಖ್ಯಾತಿಯಾದ ಮುರಗೋಡದ ಲಿಂ. ಮಹಾಂತ ಶಿವಯೋಗಿಗಳು ಲಿಂಗಾರ್ಚನೆ ಮಾಡಿದ ಸ್ಥಳವಾಗಿದೆ ಈ ಕಾರಣದಿಂದಲೇ ಇದು ಖ್ಯಾತಿ ಪಡೆದಿದೆ. ಪಟ್ಟಣದ ಮಧ್ಯ ಸ್ಥಳದಲ್ಲಿಇರುವುದರಿಂದ ಮರಡಿ ಬಸವೇಶ್ವರ ದೇವಸ್ಥಾನವೆಂದು ಕರೆಯಲಾಗುತ್ತಿದೆ.
ಕೃಷಿಯೇ ಈ ಭಾಗದ ಜೀವಾಳವಾಗಿರುವುದರಿಂದ ಎತ್ತುಗಳನ್ನು ಬಸವಣ್ಣ ಎಂದು ಪೂಜಿಸುವ ಭಾವನೆ ಹೊಂದಿರುವ ಜನರು, ಸಾಂಕೇತಿಕ ರೂಪದಲ್ಲಿಬಸವಣ್ಣನ ಮೂರ್ತಿಯನ್ನಿಟ್ಟು ಪೂಜಿಸುತ್ತಾರೆ. ಮುಖ್ಯ ಅರ್ಚಕ ಈರಣ್ಣಾ ಮಠಪತಿ ದೇವರಿಗೆ ನಿತ್ಯ ಪೂಜಾ ಸೇವೆ ಮಾಡುತ್ತಾರೆ.
ಜಾತ್ರಾ ಅಂಗವಾಗಿ ಬೆಳಿಗ್ಗೆ ೫-೩೦ಕ್ಕೆ ರುದ್ರಾಭಿಷೇಕ ರವಿವಾರ ೧೨-೦೦ ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗುವುದು. ಸಂಜೆ ೦೪-೩೦ಕ್ಕೆ ಸಕಲ ವಾದ್ಯ ವೃಂದದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ನಂದಿಕೋಲು ತರುವುದು. ನಂತರ ಸಂಜೆ ೦೫-೦೦ ಗಂಟೆಗೆ ರಥೋತ್ಸವ ಜರುಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply