This is the title of the web page
This is the title of the web page

Please assign a menu to the primary menu location under menu

Local News

ಕಾಡಿನಿಂದ ನಾಡಿಗೆ ಬಂದ ಚಿರತೆ ಬೆಳಗಾವಿ ನಗರದ ಇಬ್ಬರು ಕಟ್ಟಡ ಕಾರ್ಮಿಕರ ಮೇಲೆ ದಾಳಿ


ಬೆಳಗಾವಿ:  ನಗರದ ಜಾಧವ ಕಾಲೋನಿಯಲ್ಲಿ ಇಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ಚಿರತೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಬೆಳಗಾವಿಯ ಹನುಮಾನ ನಗರದ ಪಕ್ಕದಲ್ಲೇ ಇರುವ ಜಾಧವ ನಗರದಲ್ಲಿ ಕಟ್ಟಡ ಕೆಲಸದಲ್ಲಿ ನಿರತರಾದ ಸಿದ್ರಾಯ ಹಾಗೂ ಆತನ ಸಹಚರನ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದು, ಎಲ್ಲರಲ್ಲೂ ಭಯ ಮೂಡುವಂತಾಗಿದೆ.

ಕಟ್ಟಡದ ಕಪೌಂಡ್ ಜಿಗಿದು ಮನೆ ಕೆಲಸ ಮಾಡುವ ಕಾರ್ಮಿಕರ ಮೇಲೆ ದಾಳಿ ಮಾಡಿದ್ದು, ಮನೆಯ ಸುತ್ತ ಖಾಲಿ ಜಾಗದಲ್ಲಿ ದಟ್ಟ ಗಿಡಗಂಟಿಗಳು ಬೆಳೆದಿದ್ದು ಚಿರತೆ ಅಡಗಲಿಕ್ಕೆ ಅನುಕೂಲವಾಗಿದೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯವರು ಚಿರತೆಗಾಗಿ ಶೋಧ ಕಾರ್ಯ ನಡೆಸಿದ್ದು, ದ್ರೋಣ ಕ್ಯಾಮರಾ ಮೂಲಕ ಹಾಗೂ ಇನ್ನಿತರ ವಿವಿಧ ರೀತಿಯಲ್ಲಿ ಚಿರತೆ ಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ.

ಇನ್ನು ಗದಗ ಜಿಲ್ಲೆಯಿಂದ ಪರಿಣಿತರ ತಂಡ ಕೂಡಾ ಈ ಚಿರತೆ ಹಿಡಿಯಲಿಕ್ಕೆ ಬರುತ್ತಿದ್ದು ಎಲ್ಲರಿಗೂ ಈ ಚಿರತೆ ಒಂದು ಸವಾಲಾಗಿ, ಸಮಸ್ಯೆಯಾಗಿ ಕಾಣುತ್ತಿದೆ.


Gadi Kannadiga

Leave a Reply