ಬೆಳಗಾವಿ : ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಬೆಳಗಾವಿ ಖಾನಾಪುರ ಹೆದ್ದಾರಿಯಲ್ಲಿರುವ ಲೋಕಮಾನ್ಯ ಮಲ್ಟಿಪರ್ಪಸ ಕೊ ಆಪರೇಟಿವ್ ಸೊಸೈಟಿ ಖಾನಾಪುರ ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಬುಧವಾರ ದಿನಾಂಕ ೨೯ ನೇ ಮಾರ್ಚ ೨೦೨೩ ರಂದು ಬೆಳಿಗ್ಗೆ ೧೦ ರಿಂದ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಜೆನರಲ್ ಮೆಡಿಸಿನ್, ಎಲುಬು ಕೀಲು ತಜ್ಞರು, ಚಿಕ್ಕಮಕ್ಕಳ ವೈದ್ಯರು, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು, ಕಣ್ಣಿನ ವೈದ್ಯರು ಹಾಗೂ ನುರಿತ ಶಸ್ತ್ರ ಚಿಕಿತ್ಸಕರುಗಳು ಅಸ್ತಮಾ, ದಮ್ಮು ಕೆಮ್ಮು ಮಧುಮೇಹ, ರಕ್ತದೊತ್ತಡ, ಎಲುಬು ಕೀಲು ಸಮಸ್ಯೆ, ಸಂದಿವಾತ, ಚಿಕ್ಕಮಕ್ಕಳ ಆರೋಗ್ಯ ಸಮಸ್ಯೆ, ಮೋತಿಬಿಂದು ಹಾಗೂ ಮತ್ತಿತರೆ ದೃಷ್ಟಿದೋಷ, ಸ್ತ್ರೀ ಸಂಭಂದಿತ ಸಮಸ್ಯೆಗಳು, ಮೂಲವ್ಯಾಧಿ, ಭಗಂಧರ, ಫಿಶರ, ಮುಂತಾದ ಆರೋಗ್ಯ ಸಮಸ್ಯೆಗಳನ್ನು ಉಚಿತವಾಗಿ ತಪಾಶಿಸಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುವದು ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ೯೫೩೮೭೦೧೪೩೭, ೯೪೮೦೫೬೩೫೦೭, ೯೬೮೬೮೮೦೧೦೨ ಮೊಬೈಲ್ ಸಂಖ್ಯೆಗಳ ಮೇಲೆ ಸಂಪರ್ಕಿಸಲು ಸೂಚಿಸಿದ್ದಾರೆ.
Gadi Kannadiga > Local News > ಬೃಹತ್ ಆರೋಗ್ಯ ತಪಾಸಣಾ ಶಿಬಿರ
ಬೃಹತ್ ಆರೋಗ್ಯ ತಪಾಸಣಾ ಶಿಬಿರ
Suresh28/03/2023
posted on