This is the title of the web page
This is the title of the web page

Please assign a menu to the primary menu location under menu

Local News

ಪ್ರವಾಹದಿಂದ ಪಾರಾಗಲು ಮುಂಜಾಗೃತೆ ಕ್ರಮ: ಅಂಕಲಿಯಲ್ಲಿ ಅಣಕು ಪ್ರದರ್ಶನ


ಬೆಳಗಾವಿ,ಜೂನ್೩೦: ಚಿಕ್ಕೋಡಿ ತಾಲೂಕಾಡಳಿತ ಹಾಗೂ ಎನ್‌ಡಿಆರ್‌ಎಫ್ ಸಹಯೋಗದಲ್ಲಿ ತಾಲೂಕಿನ ಅಂಕಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸಾರ್ವಜನಿಕರಿಗಾಗಿ ಪ್ರವಾಹ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಯಾವ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅರಿವು ಮೂಡಿಸಲು ಅಣಕು ಪ್ರದರ್ಶನ ನಡೆಸಲಾಯಿತು. ಜೊತೆಗೆ ಪರಿಸರದ ಕುರಿತಾಗಿ ಜಾಗೃತಿ ಮೂಡಿಸಲು ವನಮಹೋತ್ಸವವನ್ನೂ ಆಚರಿಸಲಾಯಿತು.
ನದಿ ತೀರದ ಗ್ರಾಮಗಳಲ್ಲಿ ನೀರು ಆವರಿಸಿ ಪ್ರವಾಹ ಉಂಟಾದಾಗ ಅಲ್ಲಿಂದ ಪರಾಗಲು ಬಸ್, ಟ್ರಕ್, ಲೈಫ್ ಜಾಕೆಟ್, ಬೋಟ್, ಪೊಲೀಸರು, ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಹೇಗೆಲ್ಲ ಸಹಾಯಕ್ಕೆ ಬರುತ್ತಾರೆ ಅನ್ನುವುದನ್ನು ಅಣಕು ಪ್ರದರ್ಶನದಲ್ಲಿ ತಿಳಿಸಿ ಜನರಿಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು, ಎನ್‌ಡಿಆರ್‌ಎಫ್ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.


Gadi Kannadiga

Leave a Reply