This is the title of the web page
This is the title of the web page

Please assign a menu to the primary menu location under menu

State

ತಿಮ್ಮಾಪೂರ ಗ್ರಾಮದಿಂದ ಗದಗ ನಗರಕ್ಕೆ ನೂತನ ಬಸ್ಸು ಪ್ರಾರಂಭ


ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಿಂದ ಗದಗ ನಗರಕ್ಕೆ ಬೆಳಿಗ್ಗೆ 8 – 20 ಕ್ಕೆ ನೂತನವಾಗಿ ಬಸ್ಸು ಪ್ರಾರಂಭವಾಗಿದೆ.

ನೂತನ ಬಸ್ಸುಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ಸುಗೆ ತಳಿರು ತೋರಣಗಳಿಂದ ಹಾಗೂ ಹೂ ಮಾಲೆ ಗಳಿಂದ ಅಲಂಕರಿಸಿ ಪೂಜೆಯನ್ನು ಸಲ್ಲಿಸುವುದರ ಮೂಲಕ ಬರಮಾಡಿಕೊಂಡ ಸಂಚಾರಕ್ಕೆ ಚಾಲನೆ ನೀಡಿದರು.

ಈ ಬಸ್ಸು ಬೆಳಿಗ್ಗೆ ತಿಮ್ಮಾಪೂರ ಗ್ರಾಮದಿಂದ ಗದಗ ನಗರಕ್ಕೆ ಹೋಗುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ನೌಕರಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಅನುಕುವಾಗಲಿದೆ.

ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಆಷಾಡ ಮಾಸದ ಏಕಾದಶಿ ಹಿನ್ನೆಲೆಯಲ್ಲಿ ಪಾಂಡುರಂಗನ ಮಾಲಾಧಾರಿಗಳಿಂದ ನೆಡೆದ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಗದಗ ಕೆ ಎಸ್ ಆರ್ ಟಿ ಸಿ ವಿಭಾಗಿಯ ನಿಯಂತ್ರಣ ಅಧಿಕಾರಿ ಡಿಸಿ ಜಿ ಸೀನಯ್ಯ ಅವರಿಗೆ ಶಾಲಾ ವಿದ್ಯಾರ್ಥಿಗಳು ಹಾಗೂ ರೈತ ಸಂಘ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು , ಸಾರ್ವಜನಿಕರು ಬಸ್ಸು ಪ್ರಾರಂಭಿಸಲು ಮನವಿ ಪತ್ರವನ್ನು ನೀಡಲಾಯಿತು.
ಮನವಿಗೆ ಸ್ಪಂದಿಸಿದ ವಿಭಾಗಿಯ ನಿಯಂತ್ರಣ ಅಧಿಕಾರಿಗಳು ಬಸ್ಸು ಪ್ರಾರಂಭ ಮಾಡಿದ್ದಾರೆ.
ಅದಕ್ಕೆ ವಿದ್ಯಾರ್ಥಿಗಳು ಹಾಗೂ ರೈತ ಸಂಘ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು , ಸಾರ್ವಜನಿಕರು ಡಿಸಿ ಜಿ ಸೀನಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ, ಶರಣಪ್ಪ ಜೋಗಿನ, ನೀಲಪ್ಪ ಗಾಜಿ, ಆನಂದ ಇದ್ಲಿ ,ಗುಳಪ್ಪ ಹಚ್ಚಪ್ಪನವರ,ಆನಂದ ಕಮ್ಮಾರ, ಅಶೋಕ ಕೆ , ಶ್ರೀಕಾಂತ ಗುಡ್ಲಾನೂರ,ಪರಸಪ್ಪ ಯತ್ನಟ್ಟಿ, ರಾಮಣ್ಣ ಖಂಡ್ರಿ, ಗೊಲ್ಲ ಸಮಾಜದ ಅಧ್ಯಕ್ಷ ಹರೀಶ ಪೂಜಾರ ಹಾಗೂ ಅರ್ಚಕರಾದ ಚಂದ್ರಶೇಖರ ಪೂಜಾರ, ವೆಂಕಟೇಶ ಪೂಜಾರ ಹಾಗೂ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.


Gadi Kannadiga

Leave a Reply