This is the title of the web page
This is the title of the web page

Please assign a menu to the primary menu location under menu

State

ಹೊಸಬರ ಚಿತ್ರವೊಂದು ನಾಳೆ ತೆರೆಗೆ ಅಪ್ಪಳಿಸಲಿದೆ


ಮನೋಹರಿ ಚಿತ್ರದ ಮೂಲಕ ಹೊಸ ನಾಯಕ ಎಂಟ್ರಿ

ಕೊಪ್ಪಳ:-ಶುಕ್ರವಾರದಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲು ಸಿದ್ಧವಾಗಿರುವ ಮನೋಹರಿ ಎಂಬ ಹೊಸಬರ ಚಿತ್ರವೊಂದು ಭಾರಿ ಸದ್ದು ಮಾಡುತ್ತಿದೆ 1ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಚಿತ್ರ ರಚಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ನಟನಾಗಬೇಕು ಎಂಬ ಕನಸು ಹೊತ್ತು ಗಾಂಧಿನಗರಕ್ಕೆ ಪಾದಾರ್ಪಣೆ ಮಾಡುವ ನಾಯಕ ಮುಂದೇನಾಗುತ್ತಾನೆ ಎಂಬ ಕಥಾಹಂದರ ಇಟ್ಟುಕೊಂಡು ಮಾಡಿರುವ ಚಿತ್ರವೇ ಮನೋಹರಿ
ಕಥೆ ಸಾಗುತ್ತಾ ಸಾಗುತ್ತಾ ನೂರು ವರ್ಷದ ಇತಿಹಾಸ ಹೇಳುತ್ತಾ ಸಾಗುತ್ತದೆ ಹಾಗೆ ಕಾಮಿಡಿ ಲವ್ ಸೆಂಟಿಮೆಂಟ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ .

ಪ್ರಥಮ ಚಿತ್ರದಲ್ಲೇ ನಟನೆ ಮೂಲಕ ಪ್ರೇಕ್ಷಕರ ಬಾಯಲ್ಲಿ ಸೈ ಎನಿಸಿಕೊಂಡಿದ್ದಾರೆ ಅವರ ಪ್ರತಿಭೆ ನೋಡಿದರೆ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಚಿತ್ರಗಳು ನಟಿಸಿರೋ ಅನುಭವ ಮೊದಲ ಚಿತ್ರ ಮನೋಹರಿ ಯಲ್ಲಿ ಎದ್ದು ಕಾಣುತ್ತದೆ .

ಹಾಗೂ ಪುನರ್ಜನ್ಮದ ಕಥೆಯೊಂದಿಗೆ ಹಿಸ್ಟರಿ ರಿಪಿಟ್ ಎನ್ನುವ ಹಾಗೆ ಕಥೆ ಹೇಳುತ್ತಾ ಸಾಗುವುದು ಮುಂದೇನು ಎನ್ನುವುದು ಪ್ರೇಕ್ಷಕರಲ್ಲಿ ನಿರಾಸೆ ಹೆಚ್ಚಿಸುತ್ತದೆ .

ಚಿತ್ರದ ಕೊನೆಯಲ್ಲಿ ಬರುವ ಕ್ಲೈಮ್ಯಾಕ್ಸ್ ದೃಶ್ಯಗಳು ಹಾಗೂ ಸೆಕೆಂಡ್ ಹಾಫ್ ದೃಶ್ಯಕ್ಕೆ ಪ್ರೇಕ್ಷಕರು ಮನಸೋಲುವಂತೆ ಅದ್ಭುತ ಚಿತ್ರ ರಚಿಸಿದ್ದಾರೆ .

ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ನಿರ್ಮಾಪಕರಾದ ರಾಜಶೇಖರ್ ರೆಡ್ಡಿ ಮತ್ತು ನಿಂಗಮ್ಮ ಅವರು ಹೊತ್ತಿದ್ದಾರೆ .

ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿರುವ ಮನೋಹರಿ ಚಿತ್ರವು ಕೊಪ್ಪಳ ಜಿಲ್ಲೆ, ವಿಜಯನಗರ ಜಿಲ್ಲೆ , ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹಾಗೂ ಜಗಳೂರು ಗ್ರಾಮದಲ್ಲಿ ಪ್ರೇಕ್ಷಕ ಅಭಿಮಾನಿಗಳಿಂದ ಉತ್ತಮ ಪ್ರಶಂಸೆ ದೊರಕುತ್ತಿರುವುದು ಚಿತ್ರದ ಯಶಸ್ವಿಗೆ ಕಾರಣವಾಗಿದೆ ಎಂದು ಚಿತ್ರತಂಡ ಅಭಿಪ್ರಾಯ ವ್ಯಕ್ತಪಡಿಸಿದೆ .


Gadi Kannadiga

Leave a Reply