ಯರಗಟ್ಟಿ: ಸಮೀಪದ ಕಟಕೋಳ ಗ್ರಾಮದ ಕನಾರ್ಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿಜ್ಞಾನ ಶಿಕ್ಷಕ-ಶಿಕ್ಷಕಿಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್. ಆರ್. ಗಂಜಿ ಶಿಕ್ಷಣ ಎಂದರೆ ಮನುಷ್ಯನ ಸರ್ವತೋಮುಖ ಬೆಳವಣಿಗೆ. “ಆರೋಗ್ಯವಾದ ಮನಸ್ಸು ಆರೋಗ್ಯವಾದ ದೇಹದೊಳಗೆ” ಎನ್ನುವ ನಾಣ್ನುಡಿಯಂತೆ ಮಗುವಿನ ಸರ್ವಾಂಗೀಣ ಬೆಳವಣಿಗೆ ಮಾಡುವುದೇ ಶಿಕ್ಷಣದ ಗುರಿ. ಶಾರೀರಿಕ, ಬೌದ್ಧಿಕ, ಸಾಮಾಜಿಕ, ನೈತಿಕ ವಿಕಾಸವನ್ನುಂಟು ಮಾಡುವಲ್ಲಿ ಆರೋಗ್ಯ ಹಾಗೂ ಶಿಕ್ಷಣ ಮಹತ್ವದ ಪಾತ್ತವನ್ನು ವಹಿಸುತ್ತದೆ.
ಆದ್ದರಿಂದಲೇ ಆರೋಗ್ಯ ಶಿಕ್ಷಣ ಕ್ಷೇತ್ರವನ್ನು ಶಿಕ್ಷಣದ ಅವಿಭಾಜ್ಯ ಅಂಗ ಎಂಬುದಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಇಲಾಖೆ ಕಟಕೋಳ ಸಂಯುಕ್ತಾಶ್ರಯದಲ್ಲಿ ಡೆಂಘಿ, ಚಿಕನ್‌ಗುನ್ಯಾ, ಮಲೇರಿಯಾ, ಮಿದುಳು ಜ್ವರ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಲಾಯಿತು.
ವಿ. ಎಸ್. ಯರಗುದ್ದಿ ಮಾತನಾಡಿ, ಡೆಂಘ, ಚಿಕ್ಯೂನ್‌ಗುನ್ಯಾ, ಮಿದುಳು ಜ್ವರ, ಜೀಕಾ ವೈರಸ್ ರೋಗ ಲಕ್ಷಣಗಳು ಮತ್ತು ಹರಡುವಿಕೆ, ಅದರ ನಿಯಂತ್ರಣ, ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಪ್ರಾಸ್ತಾವಿಕ ಮಾತನಾಡಿದರು. ಈರಣ್ಣ ಕಾಕೂರ ಕ್ಷಯರೋಗದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ವೈದ್ಯಾಧಿಕಾರಿ ಎಂ.ಎಸ್.ಶಾಲದಾರ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಡಿ. ಐನಾಪೂರ ಪಾಂಡುರಂಗ ಜಟಗನ್ನರ ಎಸ್. ವಿ. ದೀವಟಗಿ ಇತರರಿದ್ದರು.
Gadi Kannadiga > Local News > ವಿಜ್ಞಾನ ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾg
ವಿಜ್ಞಾನ ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾg
Suresh12/08/2023
posted on
