ಬೆಳಗಾವಿ ೧೫- ರಂಗಸಂಪದ ಬೆಳಗಾವಿಯರಿಂದ ನಗರದ ಕೋನವಾಳ ಬೀದಿಯಲ್ಲಿರುವ ಲೋಕಮಮಾನ್ಯ ರಂಗಮಂದಿರದಲ್ಲಿ ಇದೇ ದಿ.೧೪ ರವಿವಾರದಂದು ಸಾಯಂಕಾಲ ೬-೩೦ ಗಂಟೆಗೆ ರಂಗಸಂಪದದ ಈ ವರ್ಷದ ಪ್ರಥಮ ಕಾಣಿಕೆಯಾಗಿ ಚಿಟ್ಟೆ ಕಾಜಾಣ ಬೆಂಗಳೂರು ಇವರಿಂದ ಏಕವ್ಯಕ್ತಿ ಮಕ್ಕಳ ನಾಟಕವನ್ನು ಹಮ್ಮಿಕೊಂಡಿದ್ದರು.
ಈ ನಾಟಕದ ರಚನೆ ಡಾ. ಬೇಲೂರ ರಘುನಂದನ ಇವರದಾಗಿದ್ದು, ನಿರ್ದೇಶನ ಕೃಷ್ಣಮೂರ್ತಿ ಕವತ್ತಾರ ಅವರದಾಗಿತ್ತು. ೧೩ ವರ್ಷದ ಬಾಲಕ ಗೋಕುಲ ಸಹೃದಯನ ಅದ್ಭುತ ನಟನೆ ಪ್ರೇಕ್ಷಕರ ಮನ ಗೆದ್ದಿತು.
ಈ ನಾಟಕಗಳ ಪ್ರಾಯೋಜಕರಾದ ಅಭಿಷೇಕ್ ಅಲಾಯ್ಸ ಪ್ರೆöÊ.ಲಿ. ನ ಶ್ರೀಮತಿ.ಸುನೀತಾ ಮತ್ತು ಶ್ರೀ. ಮಧ್ವಾಚಾರ್ಯ ಆಯಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ರಂಗಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ, ಉಪಾಧ್ಯಕ್ಷರಾದ ಶ್ರೀ.ಗುರುನಾಥ ಕುಲಕರ್ಣಿ, .ರಾಮಚಂದ್ರ ಕಟ್ಟಿ, ಕಾರ್ಯದರ್ಶಿ ಪ್ರಸಾದ ಕಾರಜೋಳ, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ. ಪದ್ಮಾ ಕುಲಕರ್ಣಿ ಹಾಗೂ ಶ್ರೀಮತಿ. ವೀಣಾ ಹೆಗಡೆ ಉಪಸ್ಥಿತರಿದ್ದರು.
೭೦ ನಿಮಿಷಗಳಲ್ಲಿ ಏಕವ್ಯಕ್ತಿ ಮಕ್ಕಳ ನಾಟಕ ಬಾಲಕ ಸಹೃದಯ ನವರಸಗಳಲ್ಲಿಯ ಶೃಂಗಾರ ರಸ ಒಂದನ್ನು ಬಿಟ್ಟು ಉಳಿದ ಎಲ್ಲಾ ರಸಗಳನ್ನು ಅದ್ಭುತವಾಗಿ ಪ್ರದರ್ಶಿಸಿದ. ಹಲವು ಸನ್ನಿವೇಶಗಳಲ್ಲಿ ಪ್ರೇಕ್ಷಕರ ಕಣ್ಣು ತುಂಬಿ ಬಂದವು. ಹಾಗೆಯೇ ಹಲವು ಹಾಸ್ಯದ ಸನ್ನಿವೇಶಗಳು ರಂಜಿಸಿದವು. ಮಕ್ಕಳ ಮನಸ್ಥಿತಿಯನ್ನು ಮನಮುಟ್ಟುವಂತೆ ಬಿಂಬಿಸುವಲ್ಲಿ ಯಶಸ್ವಿಯಾಯಿತು. ಯಶಸ್ವಿ ಪ್ರದರ್ಶನದೊಂದಿಗೆ ರಂಗಸಂಪದ ತನ್ನ ಕಾರ್ಯವನ್ನು ಪ್ರಾರಂಭಿಸಿತು.
Gadi Kannadiga > Local News > ಏಕವ್ಯಕ್ತಿ ಮಕ್ಕಳ ನಾಟಕ ಪ್ರದರ್ಶನ
ಏಕವ್ಯಕ್ತಿ ಮಕ್ಕಳ ನಾಟಕ ಪ್ರದರ್ಶನ
Suresh15/05/2023
posted on
