This is the title of the web page
This is the title of the web page

Please assign a menu to the primary menu location under menu

State

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕುಷ್ಟಗಿ ಕಸಾಪದಿಂದ ಕವಿ ಗೋಷ್ಠಿ ಆಯೋಜನೆ


ಕುಷ್ಟಗಿ:-  75ನೇ ವರ್ಷದ ಭಾರತ ಸ್ವಾತ್ರಂತ್ಯ್ರೋತ್ಸವದ ಅಮೃತ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ಆಗಸ್ಟ್ 15 ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಕವಿಗಳು, ಬರಹಗಾರರಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ.

ಈ ಕುರಿತು ಕುಷ್ಟಗಿ ತಾಲೂಕ ಕಸಾಪ ಅಧ್ಯಕ್ಷ ವೀರೇಶ ಬಂಗಾರ ಶೆಟ್ಟರ್ ಅವರು ಆಗಸ್ಟ್ 15 ರಂದು ನಡೆಯಲಿರುವ ಕವಿ ಗೋಷ್ಟಿಯಲ್ಲಿ ವಾಚಿಸಿದ ಕವನಗಳನ್ನು ಇ – ಪುಸ್ತಕ ಮೂಲಕ ಹೊರತರಲು ತೀರ್ಮಾನಿಸಲಾಗಿದೆ. ಹಾಗಾಗಿ ಆಗಸ್ಟ್ 10ನೇ ತಾರೀಖಿನೊಳಗೆ ತಾಲೂಕಿನ ಎಲ್ಲಾ ಬರಹಗಾರರು, ಕವಿಗಳು ವಾಟ್ಸಪ್ ಮತ್ತು ಇ-ಮೇಲ್ ಮೂಲಕ ತಮ್ಮ ಸ್ವರಚಿತ ಕವಿತೆಗಳನ್ನು ತಲುಪಿಸಬೇಕು. ತಾವು ಕಳುಹಿಸುವ ಕವಿತೆಗಳಿಗೆ ಯಾವುದೇ ರೀತಿಯ ವಿಷಯ ನಿರ್ಬಂಧನೆ ಇರುವದಿಲ್ಲ, ಒಬ್ಬರು ಒಂದು ಕವಿತೆ ಅಥವಾ ಎರಡು ಚುಟುಕು, ಕಳಿಸಬಹುದು.
ಕವಿತೆಯೊಂದಿಗೆ ಕವಿಯ ಹೆಸರು, ವಿಳಾಸ ಮತ್ತು ಒಂದು ಭಾವಚಿತ್ರ ಕಳುಹಿಸಬೇಕು. ಕವಿಗೋಷ್ಠಿಗೂ ಮುನ್ನ ಇ- ಪುಸ್ತಕವನ್ನು ಕವಿಗಳಿಗೆ ತಲುಪಿಸಲಾಗುವದು. ಇ-ಪುಸ್ತಕದಲ್ಲಿ ಪ್ರಕಟವಾದ ಕವಿತೆಗಳನ್ನು 15ನೇ ತಾರೀಖಿನಂದು ನಡೆಯುವ ಕವಿಗೋಷ್ಠಿಯಲ್ಲಿ ವಾಚಿಸಬೇಕು. ಕವಿಗೋಷ್ಠಿಯ ಸ್ಥಳವನ್ನು ಶೀಘ್ರದಲ್ಲೇ ತಿಳಿಸಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!

ಇ -ಪುಸ್ತಕ ಕುರಿತು ಹೆಚ್ಚಿನ ಮಾಹಿತಿ ಹಾಗೂ ಕವಿತೆ ಕಳಿಸಬೇಕಾದ ಮಿಂಚಂಚೆ ಮತ್ತು ವ್ಯಾಟ್ಸ್ ಆ್ಯಪ್ ಸಂಪರ್ಕ ಸಂಖ್ಯೆ ಹೀಗಿದೆ
ಮೇಲ್ ಐಡಿ :
[email protected]
ವಾಟ್ಸ ಅಪ್ ಸಂಖ್ಯೆ : ೯೯೪೫೭೫೦೯೪೫
೯೬೩೨೫೧೦೮೪೧

ಆರ್ ಶರಣಪ್ಪ ಗುಮಗೇರಾ

‌     ಕೊಪ್ಪಳ


Gadi Kannadiga

Leave a Reply