This is the title of the web page
This is the title of the web page

Please assign a menu to the primary menu location under menu

State

ಜನರ ಸಮಸ್ಯೆಗೆ ಧ್ವನಿಯಾಗುವ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ


ಕೊಪ್ಪಳ ನವೆಂಬರ್ ೧೯: ಗ್ರಾಮದಲ್ಲಿರುವಂತಹ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪರಿಕಲ್ಪನೆ ಮಾಡಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ನವೆಂಬರ್ ೧೯ರಂದು ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ಚಾಲನೆ ಸಿಕ್ಕಿತು.
ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಜನರ ಸಮಸ್ಯೆಗೆ ಧ್ವನಿಯಾಗುವ ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಮಳಿಗೆಗಳ ಉದ್ಘಾಟನೆ:
ಬಳಿಕ ಕೃಷಿ, ಕಂದಾಯ, ತೋಟಗಾರಿಕೆ, ಅರಣ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಗಂಗಾವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಕಿದ್ದ ನಾನಾ ಯೋಜನೆಗಳ ಮಾಹಿತಿಯ ಮತ್ತು ವಸ್ತು ಪ್ರದರ್ಶನ ಮಳಿಗೆಗಳನ್ನು ಶಾಸಕರಾದ ಪರಣ್ಣ ಮುನವಳ್ಳಿ ಅವರು ಉದ್ಘಾಟಿಸಿದರು.
ಮನರೇಗಾ ಮಾಹಿತಿ ಕೇಂದ್ರ, ವಿವಿಧ ವಸತಿ ಯೋಜನೆಗಳ ಅರ್ಜಿ ಸ್ವೀಕಾರ ಕೇಂದ್ರ, ಗ್ರಾಮ್ ಒನ್, ಆರೋಗ್ಯ ಇಲಾಖೆಯ ಸಾಂಕ್ರಮಿಕ ಹಾಗೂ ಅಸಾಂಕ್ರಮಿಕ ರೋಗ ಆರೋಗ್ಯ ತಪಾಸಣೆ ಕೇಂದ್ರ, ಐಇಸಿ ಮಳಿಗೆ ಸೇರಿದಂತೆ ಇನ್ನೀತರ ಮಳಿಗೆ ಮತ್ತು ಕೇಂದ್ರಗಳು ಈ ವೇಳೆ ಗಮನ ಸೆಳೆದವು.
*ಗ್ರಾಮ ಸಂಚಾರ:* ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಬಳಿಕ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರುನ್ನುಮ್ ಅವರೊಂದಿಗೆ ಗ್ರಾಮ ಸಂಚಾರ ನಡೆಸಿದರು. ಮೊದಲಿಗೆ ಪಶು ಸಂಗೋಪನೆ ಇಲಾಖೆಯ ಜಾನುವಾರುಗಳ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳಿಗೆ ಭೇಟಿ ನೀಡಿ ಸಾರ್ವಜನಿಕ ಅಹವಾಲು ಆಲಿಸಿದರು. ನಂತರ ಗ್ರಾಮದ ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.
ಬಳಿಕ ಅಂಗನವಾಡಿ ೨ನೇ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಆಹಾರ ಸಾಮಗ್ರಿಗಳು ಮತ್ತು ಇನ್ನೀತರ ವ್ಯವಸ್ತೆ ಪರಿಶೀಲಿಸಿದರು. ಗ್ರಾಮ ಒನ್ ಕೇಂದ್ರಕ್ಕು ಸಹ ಭೇಟಿ ನೀಡಿ ಅಲ್ಲಿನ ಅರ್ಜಿಗಳ ಸ್ವೀಕೃತಿ ಮತ್ತು ಇನ್ನೀತರ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.
ಬಳಿಕ ಗಣಿ ಕುಲುಮೆ ಹತ್ತಿರ ತೆರಳಿ ಜೆಸ್ಕಾಂನ ೬೩ ಕೆವಿ ಡಿಟಿಸಿ ಉದ್ಘಾಟಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗದ ಬಿಪಿಎಲ್ ಕಾರ್ಡುದಾರರಿಗೆ ೭೫ ಯುನಿಟ್ ವರೆಗೆ ಉಚಿತ ವಿದ್ಯತ್ ನೀಡುವ ಸರ್ಕಾರ ಅಮೃತ ಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜನರಿಗೆ ತಿಳಿಸಲು ಇದೆ ವೇಳೆ ಜಿಲ್ಲಾಧಿಕಾರಿಗಳು, ಜೆಸ್ಕಾಂನ ಕಾರ್ಯಪಾಲಕ ಅಭಿಯಂತರರಾದ ಜೆಸ್ಕಾಂನ ರಿಯಾಜ್ ಅಹಮದ್ ಅವರಿಗೆ ನಿರ್ದೇಶನ ನೀಡಿದರು.
ಬಳಿಕ ಗ್ರಾಮದ ಸಂಗಮ ಲೇಔಟಗೆ ತೆರಳಿ ವಾಲ್ಮೀಕಿ ಭವನ ಕಟ್ಟಡ ನಿರ್ಮಾಣದ ಭೂಮಿ ಪೂಜೆ, ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದ ಆಟದ ಮೈದಾನ ಉದ್ಘಾಟನಾ ಸಮಾರಂಭಗಳಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರ ಯು ನಾಗರಾಜ್, ತಾಪಂ ಇಓ ಮಹಾಂತಗೌಡ ಪಾಟೀಲ, ಬಸವಪಟ್ಟಣ ಗ್ರಾಪಂ ಅಧ್ಯಕ್ಷರಾದ ಮಂಜಪ್ಪ, ಉಪಾಧ್ಯಕ್ಷರಾದ ಶ್ರೀಕಾಂತ ಟಿ. ಇದ್ದರು.
ಆರೋಗ್ಯ ತಪಾಸಣೆ*: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ೮೦ ಜನರಿಗೆ ಎನ್ ಸಿಡಿ, ೬೦ ಜನರಿಗೆ ನೇತ್ರ ತಪಾಸಣೆ ಮತ್ತು ೫೮ ಜನರಿಗೆ ದಂತ ತಪಾಸಣೆ ನಡೆಸಲಾಯಿತು.


Gadi Kannadiga

Leave a Reply