This is the title of the web page
This is the title of the web page

Please assign a menu to the primary menu location under menu

State

ಪರಿಸರಕ್ಕೆ ಪೂರಕವಾದ ಜೀವನ ಶೈಲಿಗೆ ಸಾಮೂಹಿಕ ಪ್ರೋತ್ಸಾಹ ವಿಷಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ


ಗದಗ ಮೇ ೧೭: ಗದಗ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮೆ.ಹೈಟೆನ್ ಫಾಸ್ಟರ‍್ಸ್, ನರಸಾಪೂರ ಇಂಡಸ್ಟ್ರಿಯಲ್ ಏರಿಯಾ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹೈಟೆನ್ ಫಾಸ್ಟರ‍್ಸ್ ಉದ್ದಿಮೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪರಿಸರಕ್ಕೆ ಪೂರಕವಾದ ಜೀವನ ಶೈಲಿಗೆ ಸಾಮೂಹಿಕ ಪ್ರೋತ್ಸಾಹ ಎಂಬ ವಿಷಯದ ಕುರಿತು ಮಂಗಳವಾರದಂದು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪರಿಸರ ಅಧಿಕಾರಿ ಶೋಭಾ ಲ ಪೋಳ ಅವರು ಮಾತನಾಡಿ ನೀರಿನ ಮಿತ ಬಳಕೆ, ಇಂಧನ ಉಳಿತಾಯ, ಸುಸ್ಥಿತ ಆಹಾರ ಪದ್ಧತಿ ಅಳವಡಿಕೆ, ಆರೊಗ್ಯಯುತ ಜೀವನಶೈಲಿ ಅಳವಡಿಕೆ, ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಕುರಿತು ವಿವರಿಸಿದರು. ಪ್ರತಿಯೊಬ್ಬರೂ ಕನಿಷ್ಟ ೧ ಸಸಿಯನ್ನು ನೆಟ್ಟು ಅದನ್ನು ಬೆಳೆಸಿ ಪೋಷಿಸಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಹರಿಯುವ ನೀರನ್ನು ತಡೆದು ಅಂತರ್‌ಜಲ ಹೆಚ್ಚಿಸಲು ಯೋಜನೆಗಳನ್ನು ರೂಪಿಸಬೇಕು. ನೀರನ್ನು ಮಿತವಾಗಿ ಬಳಸುವುದರಿಂದ ಕಡಿಮೆ ಪ್ರಮಾಣದ ಕಲುಷಿತ ನೀರು ಉತ್ಪತ್ತಿಯಾಗುತ್ತದೆ ಎಂದು ಸಲಹೆ ಮಾಡಿದರು. ಆಡಳಿತಾಧಿಕಾರಿ ಸಂತೋಷ ಪುನೇಕರ್ ಸ್ವಾಗತಿಸಿದರು. ಸಹಾಯಕ ಆಡಳಿತಾದಿಕಾರಿ ರವಿ ವಡ್ಡಟ್ಟಿ ವಂದಿಸಿದರು.


Leave a Reply