ಬೆಳಗಾವಿ ನಗರದ ಮಹಾನಗರ ಪಾಲಿಕೆಯವರು ಮಂಜೂರು ಮಾಡಿದ ಬೆಳಗಾವಿ ಸಮೀಪದ ಕಣಬರಗಿಯ ಮೂರುವರೆ ಎಕರೆ ವ್ಯಾಪ್ತಿಯ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನೂರು ಬಿಲ್ವ ಪತ್ರೆ ಸಸ್ಯಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಕ್ರಿಯಾಶೀಲ ಅಧ್ಯಕ್ಷೆ ಶ್ರೀಮತಿ ರತ್ನ ಪ್ರಭಾ ಬೆಲ್ಲದ ಅವರು ಬೆಳಗಾವಿಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದ ವೀರಶೈವ ಲಿಂಗಾಯತ ಸಮುದಾಯದವರಿಗೆ ಪ್ರತ್ಯೇಕ ರುದ್ರಭೂಮಿಯ ಅವಶ್ಯಕತೆ ಇತ್ತು. ನಮ್ಮ ವಿನಂತಿಗೆ ಸ್ಪಂದಿಸಿದ ನಗರ ಪಾಲಿಕೆಯವರು ಜಮೀನು ಮಂಜೂರು ಮಾಡಿದ್ದಲ್ಲದೇ ಅದರ ಅಭಿವೃದ್ಧಿಗಾಗಿ ಹತ್ತು ಲಕ್ಷ ರೂಪಾಯಿ ನೀಡಿದರು. ಆ ಧನ ಸಹಾಯದಿಂದ ರುದ್ರಭೂಮಿಯ ಮಧ್ಯದಲ್ಲಿ ಶವ ವಾಹನಕ್ಕಾಗಿ ರಸ್ತೆ ನಿರ್ಮಾಣ ಸಂಸ್ಕಾರಕ್ಕೆ ಬರುವವರಿಗೆ ಸಿಮೆಂಟ್ ಆಸನ ವ್ಯವಸ್ಥೆ ಮಾಡಿಸಲಾಯಿತು. ಶರಣರು ಹೇಳಿದಂತೆ ಮರಣವನ್ನು ಮಹಾ ನವಮಿಯಂತೆ ಆಚರಿಸುವ ಉದ್ದೇಶದಂತೆ ಈ ರುದ್ರಭೂಮಿಯನ್ನು ಒಂದು ಸುಂದರ ಉದ್ಯಾನ ವನವನ್ನಾಗಿ ಪರಿವರ್ತಿಸುವ ಉದ್ದೇಶ ನಮ್ಮದು ಎಂದರು. ಈ ಮಹಾ ಕೈಂಕರ್ಯಕ್ಕೆ ತನು ಮನ ಧನದ ಸಹಾಯ ಸಹಕಾರ ನೀಡಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಕೇಂದ್ರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಉಪಾಧ್ಯಕ್ಷ ಡಾ ಪ್ರಭಾಕರ ಕೋರೆ, ಸ್ಥಳೀಯ ಜನಪ್ರಿಯ ವೈದ್ಯ ಡಾ ಮಲ್ಲಪ್ಪ ಹಿಡದುಗ್ಗಿ, ಸಮಾಜ ಸೇವಕ ಗುರುದೇವ ಪಾಟೀಲ, ವೀರೇಶ್ ಹಿರೇಮಠ ಅವರುಗಳಿಗೆ ಕೃತಜ್ಞತೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಡಾ ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು. ಸಿ.ಪಿ.ಐ. ಸುನೀಲ್ ಪಾಟೀಲ್ ಮತ್ತು ಮಹಾಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Gadi Kannadiga > Local News > ಕಣಬರ್ಗಿ ರುದ್ರಭೂಮಿಯಲ್ಲಿ ಒಂದು ನೂರ ಒಂದು ಬಿಲ್ವ ಪತ್ರೆ ಗಿಡ ನೆಡುವ ಕಾರ್ಯಕ್ರಮ