This is the title of the web page
This is the title of the web page

Please assign a menu to the primary menu location under menu

State

ತಿಪ್ಪನಾಳ ಗ್ರಾಮದ ವ್ಯಕ್ತಿ ಕಾಣೆ ಪತ್ತೆಗೆ ಸಹಕರಿಸಲು ಮನವಿ


ಕೊಪ್ಪಳ, ಸೆ. ೨೦ : ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಿಪ್ಪನಾಳ ಗ್ರಾಮದ ೪೯ ವಯಸ್ಸಿನ ಮದರಸಾ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಬೇವೂರು ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ತಿಪ್ಪನಾಳ ಗ್ರಾಮದ ಮದರಸಾಬ ತಂದೆ ಹೊನ್ನರಸಾಬ ಬಡಿಗೇರ ವಯಸ್ಸು ೪೯ ವರ್ಷದ ಎಂಬ ವ್ಯಕ್ತಿಯೂ ಮಾರ್ಚ್ ೦೯ ರಂದು ಬೆಳಗಿನ ಜಾವ ೪ ಗಂಟೆಯ ಸುಮಾರಿಗೆ ಗ್ರಾಮದ ತಮ್ಮ ಜಮೀನಿನಿಂದ ಕಾಣಿಯಾಗಿ ಹೋಗಿದ್ದು, ಈ ವರೆಗೂ ಪತ್ತೆಯಾಗಿರುವುದಿಲ್ಲ ಎಂದು ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾದ ವ್ಯಕ್ತಿಯೂ ೫’೮” ಇಂಚು ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲು ಮುಖ, ಕಪ್ಪು ಕೂದಲು, ಬಿಳಿ ನೆಹರು ಶರ್ಟ, ಬಿಳಿ ದೊತಿ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಈ ಕಾಣೆಯಾದ ವ್ಯಕ್ತಿಯೂ ಎಲ್ಲಿಯಾದರು ಕಂಡು ಬಂದಲ್ಲಿ ಅಥವಾ ಈಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೂಡಲೇ ಮಾಹಿತಿಯನ್ನು ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯ ದೂರವಾಣಿ ಸಂಖ್ಯೆ; ೦೮೫೩೯-೨೩೦೧೧, ಕೊಪ್ಪಳ ಡಿ.ಎಸ್.ಪಿ ಕಛೇರಿ ದೂರವಾಣಿ ಸಂಖ್ಯೆ: ೦೮೫೩೯-೨೩೦೪೩೨, ಯಲಬುರ್ಗಾ ಸಿಪಿಐ ಕಛೇರಿ ದೂರವಾಣಿ ಸಂಖ್ಯೆ: ೦೮೫೩೪-೨೨೦೧೩೩ ಮತ್ತು ಬೇವೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: ೦೮೫೩೪-೨೨೭೬೪೧ ಮತ್ತು ಮೊ.ಸಂ. ೯೪೮೦೮೦೩೭೫೧ ಗೆ ಸಂಪರ್ಕಿಸಬಹುದು ಹಾಗೂ ಮಾಹಿತಿ ನೀಡಿದವರಿಗೆ ಯೋಗ್ಯ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Gadi Kannadiga

Leave a Reply