This is the title of the web page
This is the title of the web page

Please assign a menu to the primary menu location under menu

Local News

ನಗು ಮತ್ತು ಪ್ರಶಸ್ತಿ ವಿಜೇತ ನಾಟಕಗಳ ಪ್ರದರ್ಶನ


ಬೆಳಗಾವಿ – ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೧೨ ಶನಿವಾರದಂದು ಸಾಯಂಕಾಲ ೪-೩೦ ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ನಗು ಹಾಗೂ ಪ್ರಶಸ್ತಿ ವಿಜೇತ ನಾಟಕಗಳ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಪ್ರೊ. ಜಿ. ಕೆ. ಕುಲಕರ್ಣಿಯವರು ತಮ್ಮ ನಗೆಮಾತಗಳಿಂದ ನಗೆಗಡಲಲ್ಲಿ ತೇಲಿಸಲಿದ್ದು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ರಂಗಸಂಪದದ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿ ವಹಿಸಿಕೊಂಡಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಮುರುಗೇಶ ಶಿವಪೂಜಿ ವಹಿಸಲಿದ್ದಾರೆ. ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಗೌರವ ಕಾರ್ಯದರ್ಶಿಗಳಾದ ಆರ್. ಬಿ .ಕಟ್ಟಿ ಉಪಸ್ಥಿತರಿರುತ್ತಾರೆ. ಪ್ರಾಸ್ತಾವಿಕ ನುಡಿಗಳನ್ನು ಗುಂಡೇನಟ್ಟಿ ಮಧುಕರ ಆಡಲಿದ್ದು ಅರವಿಂದ ಹುನಗುಂದ ನಿರೂಪಿಸಲಿದ್ದರೆ.
ಇದೇ ಸಂದರ್ಭದಲ್ಲಿ ರಂಗಸಂಪದ ಹಾಗೂ ಹಾಸ್ಯಕೂಟ ಸಂಯುಕ್ತ ಆರ್ಶಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿರುನಾಟಕ ಸ್ಪರ್ಧೆಯಲ್ಲಿ ಅರವಿಂದ ಪಾಟೀಲ ರಚಿಸಿ, ನಿರ್ದೇಶಿಸಿದ ‘ಕ್ಯಾಪ್ಟನ್ ವಿಕ್ರಮ ಬಾತ್ರಾ’ (ಪ್ರಥಮ), ಡಾ. ನಿರ್ಮಲಾ ಬಟ್ಟಲ ರಚಿಸಿ, ನಿರ್ದೇಶಿಸಿದ ‘ಸತ್ತವರು ಹೇಳಿದ ಕಥೆ’ (ದ್ವಿತೀಯ), ಚಂದ್ರಿಕಾ ಕುಲಕರ್ಣಿ ರಚಿಸಿ ನಿರ್ದೇಶಿಸಿದ ‘ಸಾಮ್ರಾಟ ಅಶೋಕ’ (ತೃತೀಯ), ರಾಹುಲ ಮೋಹನದಾಸ ಬರೆದು ನಿರ್ದೇಶಿಸಿರುವ ‘ಸಾಕ್ಷಾತ್ಕಾರ’ (ನಾಲ್ಕನೇ), ಹಾಗೂ ಶೀತಲ ರಾಜಪುರೋಹಿತ ರಚಿಸಿ ನಿರ್ದೇಶಿಸಿದ ‘ಟೊಪ್ಪಿಗೆ ಮಾರುವವ ಮತ್ತು ಮಂಗಗಳು’ (ಐದನೇ) ಬಹುಮಾನಗಳನ್ನು ಪಡೆದ ಕಿರುನಾಟಕಗಳ ಮರು ಪ್ರದರ್ಶನವನ್ನು ಹಾಸ್ಯಕೂಟ ಹಮ್ಮಿಕೊಂಡಿದೆ.


Leave a Reply