This is the title of the web page
This is the title of the web page

Please assign a menu to the primary menu location under menu

Local News

ಪಿತೃ ಪಕ್ಷದ ಪ್ರಯುಕ್ತ ಶ್ರೀ ಅಶ್ವತ್ಥ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ


ಬೆಳಗಾವಿ ೧೯- ಶ್ರೀ ಅಶ್ವತ್ಥ ಲಕ್ಷ್ಮೀ ನರಸಿಂಹ ದೇವಸ್ಥಾನ, ಎಂ.ಕೆ.ಹುಬ್ಬಳ್ಳಿಯಲ್ಲಿ ಪ್ರತಿ ವರ್ಷದಂತೆ ಈ ಸಲವು ದೇವಸ್ಥಾನ ವಿಶ್ವಸ್ಥ ಮಂಡಳಿವತಿಯಿಂದ ಶುಭಕೃತನಾಮ ಸಂವತ್ಸರದ ಪಿತೃಪಕ್ಷದಲ್ಲಿ, ಸದ್ಭಕ್ತರಿಗೆ ಪಿತೃ ತರ್ಪಣಕ್ಕೆ ಕಾರ್ಯಕ್ಕೆ ಎಲ್ಲ ಅನುಕೂಲತೆ ಮಾಡಿಕೊಡಲಾಗಿದೆ.
ಇದೇ ೨೫ ರವಿವಾರದಂದು ಸರ್ವಪಿತೃ ಅಮಾವಾಸ್ಯೆ ಇಂದು ಆ ದಿನ ಪಂ. ಸುಧೀಂದ್ರ ಆಚಾರ್ಯ ಗಿರಿಭಟ್ಟನವರ ಹಾಗೂ ಇತರ ಪಂಡಿತರಿಂದ ಪಿತೃ ಪಕ್ಷದ ಬಗ್ಗೆ ಉಪನ್ಯಾಸ, ಸಂಕಲ್ಪ ಹಾಗೂ ಪಿಂಡಪ್ರದಾನ ಕಾರ್ಯಕ್ರಮಗಳು ಜರುಗುವವು. ಸದ್ಭಕ್ತರು ಇದರ ಉಪಯೋಗ ಪಡೆಯಲು ಆಡಳಿತ ಮಂಡಳಿಯವರು ಈ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
ಇದಕ್ಕೂ ಮೊದಲು ಪೂರ್ವಭಾವಿ ಸಭೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ವೆಂಕಣ್ಣಾಚಾರ್ ಕೌಜಲಗಿ, ಉಪಾಧ್ಯಕ್ಷರಾದ ಭೀಮಸೇನಾಚಾರ್ಯ ಅಷ್ಟಪುತ್ರೆ, ಸದಸ್ಯರಾದ ಪಾಂಡುರಂಗ ಕುಲಕರ್ಣಿ, ಗುರುರಾಜ ಮಠದ, ಕಾರ್ಯದರ್ಶಿ ವಾದಿರಾಜ ಬಾಜಿಕರ, ಕಿರಣ ಗಣಾಚಾರಿ, ರಾಮಕೃಷ್ಣ ಬೆಳಗಾಂವಕರ, ಸಂದೀಪ ಕುಲಕರ್ಣಿ, ಮುಂತಾದವರು ಉಪಸ್ಥಿತರಿದ್ದರು. ಹೆಚ್ಚಿನ ವಿವರಗಳಿಗಾಗಿ ಮೊ: ೯೯೦೧೧೬೪೫೬೦, ೮೭೬೨೭೬೪೫೬೦ ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply