ಗಡಿ ಕನ್ನಡಿಗ
ಖಾನಾಪುರ: 16ನೇ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನ್ನು ಜಿಲ್ಲಾಡಳಿತದ ಸಹಯೋಗದೊಂದಿಗೆ ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಇವರು ದಿನಾಂಕ: 4 ಮತ್ತು 5ನೇ ಅಕ್ಟೋಬರ 2025 ರಂದು ಆಯೋಜನೆ ಮಾಡಿದ್ದು ಈ ಚಾಂಪಿಯನ್‌ಶಿಪ್‌ನಲ್ಲಿ ಸುಮಾರು 200 ರಿಂದ 250 ಜನ ಪುರುಷ/ಮಹಿಳಾ ಸೈಕ್ಲಿಂಗ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ದಿನಾಂಕ: 04/09/2025 ರಂದು ಬೆಳಗಾವಿ ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ 16ನೇ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನ ಸ್ಪರ್ಧೆಯನ್ನು ಬೆಳಗಾವಿಯ ಖಾನಾಪೂರ ರಸ್ತೆಯ ಜಾಡ್ ಶಾಹಸೂರದಿಂದ ಖಾನಾಪೂರ ಟೋಲ್ ಪ್ಲಾಜಾ ವರೆಗೆ (4 ಕಿ.ಮೀ) ಮಾರ್ಗವನ್ನು ನಿಗದಿಪಡಿಸಲಾಗಿದೆ
*ಗಣೆಬೈಲ್ ದಿಂದ ಝಾಡ ಶಹಾಪುರವರೆಗೂ ಏಕ ಮುಖ ಸಂಚಾರ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ*.
ಶನಿವಾರ ಮತ್ತು ರವಿವಾರ ಬೆಳಗಾವಿ-ಖಾನಾಪುರ ರಸ್ತೆಯ ಗಣೆಬೈಲ್ ಟೋಲ್ ದಿಂದ ಝಾಡ ಶಹಾಪುರ ವರೆಗೂ ಬೆಳಗ್ಗೆ 6.00 ಗಂಟೆಯಿಂದ ಸಾಯಂಕಾಲ 4.00 ಗಂಟೆಯವರೆಗೆ ಮಾರ್ಗದುದ್ದಕ್ಕೂ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ವಾಹನ ಸವಾರರು ಸಹಕರಿಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.