ಯಶಸ್ವಿ ಹಾಗೂ ಪರಿಣಾಕಾರಿ ಪುಸ್ತಕ ಸಂತೆ

Murugesh Shivapuji
ಯಶಸ್ವಿ ಹಾಗೂ ಪರಿಣಾಕಾರಿ ಪುಸ್ತಕ ಸಂತೆ
WhatsApp Group Join Now

ಬೆಳಗಾವಿ ಜೂ  – ಗ್ರಾಮೀಣ ಪದ ‘ಸಂತೆ’ ಯನ್ನು ಪುಸ್ತಕ ಸಂತೆಗೆ ಅನ್ವಯಿಸಿ ಸಾಹಿತಿಗಳು ಹಾಗೂ ಓದುಗರ ನಡುವೆ ಬಾಂಧವ್ಯ ಬೆಸೆದ ‘ಪುಸ್ತಕ ಸಂತೆ’ ಮಹತ್ವದ ಕೆಲಸವಾಗಿದೆ. ಇದರಿಂದ ಸಾಹಿತಿಗಳಲ್ಲಿರುವ ಪುಸ್ತಕಗಳು ಬೆಳಕಿಗೆ ಬರುತ್ತವೆ ಹಾಗೂ ಓದುಗರಿಗೆ ಸುಲಭವಾಗಿ ಲಭ್ಯವಾಗುತ್ತವೆ. ಇಂದು ಮುದ್ರಣ ವ್ಯವಸ್ಥೆ ನೂತನ ಆವಿಷ್ಕಾರ ಪಡೆದಿದ್ದರಿಂದ ಪ್ರತಿ ವರ್ಷ ಪುಸ್ತಕಗಳು ಭರದಿಂದ ಬರುತ್ತಿದ್ದು, ಅದಕ್ಕೆ ತಕ್ಕಂತೆ ಓದುಗರ ಪಡೆ ನಿರ್ಮಾಣವಾಗುವಲ್ಲಿ ಪುಸ್ತಕ ಸಂತೆ ಸಾರ್ಥಕ ಮತ್ತು ವಿನೂತನ ಪ್ರಯೋಗವಾಗಿದೆ.
ಬೆಳಗಾವಿ ನೆಹರು ನಗರದಲ್ಲಿರುವ “ಕನ್ನಡ ಭವನ” ನದಲ್ಲಿ ಕನ್ಡಡ ಭವನ ವತಿಯಿಂದಲೇ ನಡೆದ ಪುಸ್ತಕ ಸಂತೆಯನ್ನು ಉದ್ಘಾಟಿಸಿ, ನಾಡ ಹಬ್ಬ ದಿನಾಚರಣೆ ಸಮಿತಿ ಅಧ್ಯಕ್ಷರಾದ ಡಾ.ರಾಜಶೇಖರ್ ರವರು ಹೇಳಿದರು.
ಅತಿಥಿ ಸ್ಥಾನದಿಂದ ಹಿರಿಯ ಸಾಹಿತಿಗಳಾದ ಡಾ.ಸರಜು ಕಾಟ್ಕರ್ ರವರು ಮಾತನಾಡಿ, ಇದೊಂದು ವಿನೂತ ಪ್ರಯೋಗ. ಸುಮಾರು ೩೦ ವರ್ಷಗಳ ಹಿಂದೆ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಇಂತಹ ಪ್ರಯೋಗ ಮಾಡಲಾಗಿತ್ತು ಎಂದರು.
ಇನ್ನೊರ್ವ ಅತಿಥಿ ಸ್ಥಾನದಿಂದ ಮಾತನಾಡಿದ ರಂಗಕರ್ಮಿ ಸಾಹಿತಿ ಶಿರೀಷ ಜೊಷಿಯವರು ಮಾತನಾಡಿ ಸಾಹಿತ್ಯ ನಿರ್ಮಾಣ ಸರಳವಾಗಿದ್ದರೆ ಓದುಗನ ಎದೆ ತಲುಪಲು ಸಾಧ್ಯ, ನೆಟ್ ಪ್ಲೆಕ್ಸ ವಾಹಿನಿಗೆ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಸದಸ್ಯರಿದ್ದರೂ ಕನ್ನಡ ಸಿನೇಮಾಳಾಗಳು ಬರುತ್ತಿಲ್ಲ, ಇದು ಪ್ರತಭಟನೆಗೆ ಅರ್ಹಸಂಗತಿ, ಎಂದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ.ಎಸ್.ಎಂ. ಗಂಗಾಧರವರು ಮಾತನಾಡಿ ಬೆಳಗಾವಿ ಬ್ರಿಟೀಷ ಆಡಳಿತದಲ್ಲಿದ್ದಾಗ
ಕಾಂಗ್ರೇಸ್ ಅಧಿವೇಶನ, ತದನಂತರ ಹಲವಾರು ಮಹತ್ವದ ಸಮಾವೇಶಗಳನ್ನು‌ ಕಂಡಡಿದ್ದು ಈ ಹೆಗ್ಗಳಿಕೆ ಇವತ್ತಿನ ಪುಸ್ತಕ ಸಂತೆ ಕಾರ್ಯಕ್ರಮವನ್ನು ಸೇರಿಸಬಹುದು ಎಂದರು.
ಷ ಅಧ್ಯಕ್ಷತೆ ವಹಿಸಿದ್ದ ಬಿ.ಎಸ್.ಗವಿಮಠರವರು ಮಾತನಾಡುತ್ತ ಬಸವರಾಜ ಕಟ್ಟಿಮನಿ, ಕೃಷ್ಣ ಮೂರ್ತಿ ಪುರಾಣಿಕ ,ಶಂಭಾ.ಜೊಷಿ ಮುಂತಾದ ಸಾಹಿತಿಗಳ ಶ್ರೇಷ್ಠ ಪರಂಪರೆ ಜಿಲ್ಲೆ ಹೊಂದಿದೆ ಎಂದರು
ಸಂಘಟನೆ ಮಾಡಿದ ಕನ್ನಡ ಭವನದ ಕಾರ್ಯದರ್ಶಿ ಯ.ರು.ಪಾಟೀಲರವರು ಸಂತೆ ಮುಗಿದ ನಂತರ ಮಾತನಾಡುತ್ತಾ ಸಂತೆಯ ಮೂಲ ಉದ್ದ

WhatsApp Group Join Now
Telegram Group Join Now
Share This Article
error: Content is protected !!