This is the title of the web page
This is the title of the web page

Please assign a menu to the primary menu location under menu

Local News

ಕಾಡಿನಂಚಿನಲ್ಲಿರುವ ಯುವಕ ಯುವತಿಯರಿಗೆ ಸೂಕ್ತ ತರಬೇತಿ ಕಾರ್ಯಕ್ರಮ


ಬೆಳಗಾವಿ, ಜ.೧೧ : ಪ್ರಥಮ ಬಾರಿಗೆ ಬೆಳಗಾವಿ ವೃತ್ತದಲ್ಲಿ ವಿವಿಧ ಹೊಸ ಚಾರಣ ಪಥಗಳನ್ನು (ಖಿಡಿeಞಞiಟಿg ಖಿಡಿiಚಿಟs) ಗುರುತಿಸಲಾಗಿದ್ದು, ಈ ಹೊಸ ಚಾರಣ ಪಥಗಳಲ್ಲಿ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲು ಕಾಡಿನಂಚಿನಲ್ಲಿರುವ ಯುವಕ ಯುವತಿಯರಿಗೆ ಸೂಕ್ತ ತರಬೇತಿ ನೀಡಲು ಕರ್ನಾಟಕ ಪರಿಸರ ಪ್ರವಾಸೋಧ್ಯಮ ಅಭಿವೃದ್ಧಿ ಮಂಡಳಿ ಹಾಗೂ ಬೆಳಗಾವಿ ಅರಣ್ಯ ವೃತ್ತದವರು ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಮ್ಮಡಗಾದಲ್ಲಿ ಜನವರಿ ೧೦ ರಿಂದ ವಿಧ್ಯುಕ್ತವಾಗಿ ಆರಂಭಗೊAಡಿದೆ. ಹಾಗೂ ಈ ತರಬೇತಿಯು ಒಂದು ವಾರಗಳ ಕಾಲ ನಡೆಯಲಿದೆ.
ಈಗಾಗಲೇ ಬೆಳಗಾವಿ ವಿಭಾಗದಲ್ಲಿ ಒಟ್ಟು ೮ ಹೊಸ ಚಾರಣ ಪಥಗಳನ್ನು ಧಾಮಣೆ, ತಿಲಾರಿ, ಕಡಾ, ಚಿಕಳೆ, ಸಡಾ, ಬುಡಬುಡಾ ಸ್ಪಿçಂಗ್, ವಜ್ರಫಾಲ್ಸ್ ಹಾಗೂ ಹಂಡಿಬಡಗನಾಥ ವೀಕ್ಷಣಾ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲು ಒಟ್ಟು ೨೫ ಜನ ಪ್ರಕೃತಿ ಮಾರ್ಗದರ್ಶಕರಿಗೆ ತರಬೇತಿ ನೀಡಲಾಗುವುದು. ಹಾಗೆಯೇ ರಾಮದುರ್ಗದಲ್ಲಿ ಹೂವಿನಕೊಳ್ಳ ಮತ್ತು ಈಶ್ವರಕೊಳ್ಳ ಜಾಗಗಳÀಲ್ಲಿಯೂ ಚಾರಣ ಪಥಗಳನ್ನು ಪ್ರಾರಂಭಿಸಿದ್ದು, ಅಲ್ಲಿನ ಒಟ್ಟು ೧೦ ಜನ ಯುವಕ ಯುವತಿಯರಿಗೆ ಮತ್ತು ಬಾದಾಮಿ ಹತ್ತಿರದ ಸಿಡಿಲ ಪಡಿಯ ಚಾರಣ ಪಥಗಳÀಲ್ಲಿ ಕಾರ್ಯನಿರ್ವಹಿಸಲು ಒಟ್ಟು ೦೫ ಜನ ಪ್ರಕೃತಿ ಮಾರ್ಗದರ್ಶಕರನ್ನು ಪ್ರವಾಸಿಗರಿಗಾಗಿ ನಿಯೋಜಿಸಲಾಗುವುದು.
ಈ ತರಬೇತಿ ಕಾರ್ಯಕ್ರಮವನ್ನು ಬೆಳಗಾವಿ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಸಾಲಿಮಠ ರವರು ಉದ್ಘಾಟಿಸಿ ಮಾತನಾಡಿ, ಈ ತರಬೇತಿಯಿಂದ ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗವಕಾಶ ಮಾಡಿಕೊಡುವುದಲ್ಲದೆ ಅರಣ್ಯ ಇಲಾಖೆ ಹಾಗೂ ಕಾಡಂಚಿನ ಜನರ ನಡುವಿನ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ವಿವಿಧ ಸಂಪನ್ಮೂಲ ವ್ಯಕ್ತಿಗಳು, ಪರಿಸರ, ಪಕ್ಷಿ ವೀಕ್ಷಣೆ, ಸ್ಥಳೀಯ ಮರಗಿಡಗಳ ಪ್ರಭೇದ, ವನ್ಯಜೀವಿ ಸಂರಕ್ಷಣೆ, ಸ್ಥಳ ಮಹಿಮೆ, ಪ್ರವಾಸಿಗರ ಜೊತೆ ಸಂವಹನ ಇತ್ಯಾದಿಗಳ ಬಗ್ಗೆ ವಿವರವಾಗಿ ತರಬೇತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಬೆಳಗಾವಿ ಅರಣ್ಯ ವಿಭಾಗದ ಹರ್ಷಬಾನು ಜಿ. ಪಿ. ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನವೀನ್ ಹಾಗೂ ಅರಣ್ಯ ಇಲಾಖೆಯ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply