This is the title of the web page
This is the title of the web page

Please assign a menu to the primary menu location under menu

State

ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ ಒಟ್ಟು ೧೧,೩೬,೮೩೮ ನೋಂದಾಯಿತ ಮತದಾರರು


ಕೊಪ್ಪಳ ಏಪ್ರಿಲ್ ೨೪ ): ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ರ ಹಿನ್ನೆಲೆಯಲ್ಲಿ ಏಪ್ರಿಲ್ ೨೦ ಕೊನೆಗೊಂಡಂತೆ ಐದು ವಿಧಾನ ಸಭಾ ಕ್ಷೇತ್ರಗಳು ಒಳಗೊಂಡು ಜಿಲ್ಲೆಯಲ್ಲಿ ಒಟ್ಟು ೧೧,೩೬,೮೩೮ ನೋಂದಾಯಿತ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಒಟ್ಟು ಮತದಾರರಲ್ಲಿ ಪುರುಷರು ೫,೬೬,೩೮೧ ಹಾಗೂ ಮಹಿಳೆಯರು ೫,೭೦,೪೦೭ ಮತ್ತು ೫೦ ಇತರೆ ಮತದಾರರು ಇದ್ದಾರೆ.
ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ: ೬೦-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ೧,೧೭,೬೬೧ ಪುರುಷರು, ೧,೧೫,೯೫೫ ಮಹಿಳೆಯರು ಹಾಗೂ ೯ ಇತರೆ ಸೇರಿ ೨,೩೩,೬೨೫ ಮತದಾರರು. ೬೧-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ೧,೧೦,೫೮೭ ಪುರುಷರು, ೧,೧೩,೪೪೬ ಮಹಿಳೆಯರು ಹಾಗೂ ೯ ಇತರೆ ಸೇರಿ ೨,೨೪,೦೪೨ ಮತದಾರರು. ೬೨-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ೧,೦೦,೨೯೫ ಪುರುಷರು, ೧,೦೧,೮೯೯ ಮಹಿಳೆಯರು ಹಾಗೂ ೧೨ ಇತರೆ ಸೇರಿ ೨,೦೨,೨೦೬ ಮತದಾರರು. ೬೩-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ೧,೧೧,೮೮೪ ಪುರುಷರು, ೧,೧೧,೧೪೪ ಮಹಿಳೆಯರು ಹಾಗೂ ೮ ಇತರೆ ಸೇರಿ ೨,೨೩,೦೩೬ ಮತದಾರರು. ೬೪-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ೧,೨೫,೯೫೪ ಪುರುಷರು, ೧,೨೭,೯೬೩ ಮಹಿಳೆಯರು ಹಾಗೂ ೧೨ ಇತರೆ ಸೇರಿ ೨,೫೩,೯೨೯ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.


Leave a Reply