This is the title of the web page
This is the title of the web page

Please assign a menu to the primary menu location under menu

Local News

À ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ವರೆಗೆ ರೈಲು ಸಂಚಾರ


ಮೂಡಲಗಿ: ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಬಾಬಾ ಅವರ ಆಶ್ರಮಕ್ಕೆ ಕರ್ನಾಟಕದಿಂದ ಹೋಗುವ ಭಕ್ತಾಧಿಗಳ ಅನುಕೂಲಕ್ಕಾಗಿ ಬಸವ ಎಕ್ಸ್ಪ್ರೇಸ್ (ಮೈಸೂರು-ಬಾಗಲಕೋಟೆ-ಮೈಸೂರು- ರೈಲು ಸಂಖ್ಯೆ- ೧೭೩೦೭/೧೭೩೦೮) ಸದರಿ ರೈಲು ನಾಳೆಯಿಂದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದವರೆಗೆ ಸಂಚಾರ ಪ್ರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ಗುರುವಾರದಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಕರ್ನಾಟಕದಿಂದ ಲಕ್ಷಾಂತರ ಭಕ್ತರು ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಬಾಬಾ ಅವರ ದರ್ಶನಕ್ಕೆ ತೆರಳಲು ಅನುಕೂಲವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಜನತೆಯ ಪರವಾಗಿ ತುಂಬು ಹೃದಯದಿಂದ ಅಭಿನಂದಿಸುತ್ತೇನೆಂದರು.
ರಾಜ್ಯಸಭೆಯ ಮುಂಗಾರು ಅಧಿವೇಶನದ ವಿಶೇಷ ಸಂದರ್ಭದಲ್ಲಿ ಕರ್ನಾಟಕದಿಂದ ಚಲಿಸುವ ರೈಲುಗಳ ನಿಲುಗಡೆಗೆ ಸಂಬಂಧಿಸಿದಂತೆ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸಚಿವರ ಗಮನ ಸೆಳೆದು ಮನವಿ ಮಾಡಿದ್ದರು. ಹಂಪಿ ಎಕ್ಸ್ಪ್ರೇಸ್ ರೈಲಿನ ಸ್ಥಳ ಬದಲಾವಣೆಯ ಬೇಡಿಕೆಯು ಕೂಡಾ ಯೋಜನಾ ಹಂತದಲ್ಲಿದೆ. ಅದು ಕೂಡಾ ಶೀಘ್ರದಲ್ಲಿಯೇ ನೆರವೇರಲಿದೆ ಭಕ್ತಾಧಿಗಳು ಇದರ ಪ್ರಯೋಜನೆ ಪಡೆಯಬೇಕೆಂದರು.


Gadi Kannadiga

Leave a Reply