This is the title of the web page
This is the title of the web page

Please assign a menu to the primary menu location under menu

Local News

ರಾಜ್ಯದ ಅಭಿವೃದ್ಧಿಯ ದೂರದೃಷ್ಟಿ ಇರುವ ಭಾಗ್ಯದ ಬಡ್ಜೆಟ್…!! ಜನಪರವಾದ ಬಡ್ಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ…!! ಕೆಪಿಸಿಸಿ ಪದಾಧಿಕಾರಿ ಗಜಾನನ ಧರನಾಯ್ಕ ಅಭಿಮತ..


ಬೆಳಗಾವಿ: ಶುಕ್ರವಾರ ದಿನಾಂಕ ೦೭/೦೭/೨೦೨೩ರಂದು ಕರ್ನಾಟಕ ರಾಜ್ಯದ ಹಣಕಾಸು ಮಂತ್ರಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡಿದ ದಾಖಲೆ ಹದಿನಾಲ್ಕನೆಯ ಮುಂಗಡಪತ್ರವು ಜನಪರವಾಗಿದ್ದು, ರಾಜ್ಯದ ಅಭಿವೃದ್ಧಿಯ ದೂರದೃಷ್ಟಿ ಹೊಂದಿದೆ ಎಂದು ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಸಂಚಾಲಕರಾದ ಗಜಾನನ ಧರನಾಯ್ಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಸಾರ್ವಜ£ಕ ಸ್ಥಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮಂಡಿಸಿದ ಈ ಬಡ್ಜೆಟ್ ಬಡ ಹಾಗೂ ಮಧ್ಯಮ ವರ್ಗದ ಜನರ ಆಶಾಕಿರಣ ಆಗಿದೆ, ಕೃಷಿ, ಉದ್ದಿಮೆ, ವಾಣಿಜ್ಯ, ಸಾರಿಗೆ, ಸಹಕಾರ ಕ್ಷೇತ್ರ, ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲಭೂತ ಸೌಕರ್ಯ ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳ ಬೆಳವಣಿಗೆಯತ್ತ ಹಾಗೂ ಜನರ ಜೊತೆ ಇಡೀ ಸಮಾಜದ ಅಭಿವೃದ್ದಿಯ ಅಂಶಗಳನ್ನು ಹೊಂದಿರುವ ಉತ್ತಮ ಮುಂಗಡ ಪತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,
ಸಿ ಎಂ ಸಿದ್ದರಾಮಯ್ಯ ಅವರು ಮಂಡಿಸಿದ ತಮ್ಮ ದಾಖಲೆಯ ೧೪ ನೆಯ, ಮೂರು ತಾಸಿನ ಈ ಬಡ್ಜೆಟ್ ನಲ್ಲಿ, ರಾಜ್ಯಕ್ಕೆ ೩, ೨೭, ೭೪೮ ಕೋಟಿಗಳ ಬ್ರಹತ್ ಮೊತ್ತದ ಬಡ್ಜೆಟ್ ಮಂಡನೆ ಮಾಡಿದ್ದು ವಿಶೇಷ ಎಂದರು..
ಪಕ್ಷದ ಐದು ಗ್ಯಾರೆಂಟಿಗಳಿಗೆ ೫೨ ಸಾವಿರ ಕೋಟಿ ವಿಶೇಷ ಅನುದಾನ ತಗೆದಿಡಲಾಗಿದ್ದು, ವಿಶೇಷ ಹೆಚ್ಚಿನ ಅನುದಾನದಿಂದ ಜನರಿಗೆ ಅನುಕೂಲ ಆಗುವ ಗ್ಯಾರೆಂಟಿ ಯೋಜನೆಗಳನ್ನು ಸಂಪೂರ್ಣ ಕಾರ್ಯಗತ ಮಾಡುವ ಈ ಭಾಗ್ಯದ ಬಡ್ಜೆಟ್ ಅನುಕೂಲಕರವಾಗಿದೆ ಎಂದಿದ್ದಾರೆ..
ಇನ್ನೂ ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನ £Ãಡಿದ್ದು, ಬೆಂಗಳೂರಿಗೆ ಬಂಪರ್ ಗಿಫ್ಟ್ ಕೊಟ್ಟಂತೆ ೪೫ ಸಾವಿರ ಕೋಟಿ ವಿಶೇಷ ಅನುದಾನ £Ãಡಲಾಗಿದೆ, ಹತ್ತನೆಯ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ಯೋಜನೆ ವಿಸ್ತರಿಸಿದ್ದು ಸ್ವಾಗತಾರ್ಹ ಎಂದರು.. ಒಟ್ಟಿನಲ್ಲಿ ಎಲ್ಲಾ ಜನಸಮುದಾಯವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಅಭಿವೃದ್ಧಿಯ ದೃಷ್ಟಿ ಇಟ್ಟುಕೊಂಡು ಮಾಡಿರುವ ಸಿದ್ದರಾಮಯ್ಯನವರ ಈ ಬಡ್ಜೆಟ್ £ಜಕ್ಕೂ ರಾಜ್ಯಕ್ಕೆ ಭಾಗ್ಯದ ಬಡ್ಜೆಟ್ ಆಗಿದೆ ಎಂದರು…


Leave a Reply