ಬೆಳಗಾವಿ: ಪ್ರಯತ್ನ ಸಂಘಟನೆಯ ಕಾರ್ಯಕರ್ತರು ದಿ. 10/8/23ರಂದು ಬೆಳಗಾವಿಯ ಶಾಹು ನಗರದಲ್ಲಿರುವ ಸಮೃದ್ಧಿ ಫೌಂಡೇಷನ್ ಅನಾಥಾಶ್ರಮಕ್ಕೆ ಭೇಟಿ ಮಾಡಿದರು.
ಅಲ್ಲಿ ಸುಮಾರು 25 ಅನಾಥ ಮಕ್ಕಳಿದ್ದಾರೆ. ಎಲ್ಲ ಮಕ್ಕಳು ತುಂಬಾ ಲಲವಿಕೆಯಿಂದ ಇದ್ದಾರೆ.ತುಂಬಾ ಚೆನ್ನಾಗಿ ತಮ್ಮ ಹಾಡು ನೃತ್ಯ ಗಳನ್ನು ಪ್ರದರ್ಶಿಸಿದರು. ಸಂಘಟನೆಯ ವತಿಯಿಂದ ಅವರ ಅವಶ್ಯಕತೆಯ ಅನುಸಾರ ಸುಮಾರು 20000/- ದ ದಿನಸಿ ಸಾಮಗ್ರಿಗಳನ್ನು ದೇಣಿಗೆಯಾಗಿ ಕೊಟ್ಟರು. ಹಾಗು ಮಕ್ಕಳಿಗೆ ಬಿಸ್ಕತ್ ಚಾಕೋಲೇಟ್ ಹಣ್ಣು ಮತ್ತು ಜೂಸ್ ಪ್ಯಾಕೆಟ್ ಗಳನ್ನು ವಿತರಿಸಿದರು. ಸಂಘಟನೆಯ ಅಧ್ಯಕ್ಷೆ ಶಾಂತಾಆಚಾರ್ಯ,ಸದಸ್ಯೆಯರಾದ ಲತಾ, ಉಷಾ,ಸಂಗೀತ, ಮೀನಲ್ ಮುಂತಾದವರು ಉಪಸ್ಥಿರಿದ್ದರು.