This is the title of the web page
This is the title of the web page

Please assign a menu to the primary menu location under menu

Local News

ಬೀಕರ ಮಳೆಯಿಂದ ಮನೆಗೋಡೆ ಕುಸಿದು ಯುವಕನ ಸಾವು


ಬೆಳಗಾವಿ: ಎಡೆಬಿಡದೆ ಸುರಿಯುತ್ತಿರಯವ ಧಾರಾಕಾರ ಮಳೆಗೆ ಮನೆಗೋಡೆ ಕುಸಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಖಾನಾಪೂರ ತಾಲ್ಲೂಕಿನ ಲಿಂಗನಮಠ ಗ್ರಾ.ಪಂ ವ್ಯಾಪ್ತಿಯಲ್ಲಿ ಜರುಗಿದೆ.

ಲಿಂಗನಮಠ ಗ್ರಾ.ಪಂನ ಚುಂಚವಾಡ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು ಅನಂತು ಧರ್ಮೇಂದ್ರ ಪಾಶೆಟ್ಟಿ(15) ಎಂಬ ಯುವಕ ಸಾವನ್ನಪ್ಪಿದ್ದಾನೆ.
ಗುರುವಾರ ರಾತ್ರಿ ಮನೆಯಲ್ಲಿ ಕಟ್ಟಿದ ದನಕರುಗಳಿಗೆ ಮೇವು ಹಾಕಲು ಹೋದಾಗ ಏಕಾಏಕಿ ಗೋಡೆ ಕುಸಿದು ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ನಂದಗಡ ಪೊಲೀಸ್ ಠಾಣೆಯ ಸಿಬ್ಬಂದಿಯವರು ದೌಡಾಯಿಸಿ ಮಾಹಿತಿಯನ್ನು ಸಂಗ್ರಹಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


Gadi Kannadiga

Leave a Reply