ಬೆಳಗಾವಿ, ಮಾ.೨೦ : ಕೇಂದ್ರ ಸರ್ಕಾರದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ವತಿಯಿಂದ ಸಿದ್ದಪಡಿಸಿರುವ ವಿನೂತನ ತಂತ್ರಜ್ಞಾನ ಮೂಲಕ ಕುಷ್ಠರೋಗದಿಂದ ಬಾಧಿತರು ಹಾಗೂ ಕೈಯಲ್ಲಿನ ಹತ್ತು ಬೆರಳುಗಳು ಹಾಗೂ ಎರಡು ಕಣ್ಣು ಇಲ್ಲದಿದ್ದರೂ ಕೇವಲ ಮುಖ ಚಹರೆ (ಭಾವಚಿತ್ರ) ಮೂಲಕವೇ ಆಧಾರ ನೊಂದಣಿ ಮಾಡಲಾಗುತ್ತಿದೆ.
ಕಾರಣ ಬೆಳಗಾವಿ ಜಿಲ್ಲೆಯಲ್ಲಿ ಆಧಾರಕಾರ್ಡ ಪಡೆಯದೆ ಇರುವ ಕುಷ್ಠ ರೋಗದಿಂದ ಬಾಧಿತರು ಮತ್ತು ಎರಡು ಕಣ್ಣು ಹಾಗೂ ಎರಡು ಕೈಗಳ ಬೆರಳುಗಳು ಇಲ್ಲದಿರುವ ವಿಕಲಚೇತನರು, ಬುದ್ಧಿಮಾಂದ್ಯರು, ಬಹುವಿಧ ಅಂಗವಿಕಲ ವ್ಯಕ್ತಿಗಳು ಆಧಾರಕಾರ್ಡ ನೊಂದಣಿ ಮಾಡಿಸಲು ತಮ್ಮ ಹೆಸರನ್ನು ನೊಂದಾಯಿಸಲು ಇಲಾಖೆಯಿಂದ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೊಂದಾಯಿಸಲು ಕಛೇರಿ ದೂರವಾಣಿ ಸಂಖ್ಯೆ ೦೮೩೧-೨೪೭೬೦೯೬/೭ ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಬಹುವಿಧ ಅಂಗವಿಕಲ ವ್ಯಕ್ತಿಗಳ ಆಧಾರಕಾರ್ಡ ನೊಂದಣಿ
ಬಹುವಿಧ ಅಂಗವಿಕಲ ವ್ಯಕ್ತಿಗಳ ಆಧಾರಕಾರ್ಡ ನೊಂದಣಿ
Suresh20/03/2023
posted on