ಬೆಳಗಾವಿ : ಭೂಜನಕೂಟಕ್ಕೆ ಹೋಗಿದ್ದೇವು ಅಷ್ಟೇ ಅದರಲ್ಲಿ ರಾಜಕೀಯ ಏನು ಇಲ್ಲ ಎಂದು ಅಭಯ್ ಪಾಟೀಲ್ ಹೇಳಿದರು.
ನಗರದಲ್ಲಿಂದು ಶಿವಾಜಿ ಜಯಂತಿಯ ಮೆರವಣಿಗೆಯ ಉದ್ಘಾಟನೆ ಆಗಮಿಸಿದ ಅಭಯ್ ಪಾಟೀಲ ಮುಖ್ಯಮಂತ್ರಿಗಳ ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಶಾಸಕರಗಳನ್ನು ಭೋಜನ ಕೂಟಕ್ಕೆ ಆಹ್ವಾನಿಸಿದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಮುಖ್ಯಮಂತ್ರಿಗಳು ಎಲ್ಲಾ ಶಾಸಕರುಗಳಿಗೆ ಭೋಜನ ಕೂಟಕ್ಕೆ ಆಹ್ವಾನ ನೀಡಿದ್ದರು.
ಅದರ ನಿಮಿತ್ತ ನಾವೆಲ್ಲರೂ ಹೋಗಿದ್ದೆವು ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳ ಕುರಿತು ಚರ್ಚೆ ಮಾಡಲಾಗಲಿಲ್ಲ ಸಂಪುಟ ವಿಸ್ತರಣೆ ಕುರಿತು ಪ್ರಶ್ನೆಗೆ ಉತ್ತರಿಸುತ್ತ ನೀವೇ ಅರ್ಥೈಸಿಕೊಂಡು ಎಪಿಸೋಡ್ ಮಾಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಶಾಸಕರಾದ ಅನಿಲ್ ಬೆನಕೆ ಉಪಸ್ಥಿತರಿದ್ದರು.