This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯ ಶಿವಜಯಂತಿಯು ಮೈಸೂರು ದಸರಾದಂತಾಗಬೇಕು: ಅಭಯ ಪಾಟೀಲ್


ಬೆಳಗಾವಿ: ನಗರದ ಶಿವಾಜಿ ಉದ್ಯಾನವನದಲ್ಲಿ ಶಿವಾಜಿ ಜಯಂತಿಯ ಅಂಗವಾಗಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ಶಿವಾಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಎರಡು ವರ್ಷದಿಂದ ಕೇವಲ ಪೆಂಡಾಲ್ಗೆ ಸೀಮಿತವಾದ ಶಿವಜಯಂತಿಯನ್ನು ಈ ವರ್ಷ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.. ಬಿತ್ತಿಚಿತ್ರಗಳ ಮೆರವಣಿಗೆ ಈ ವರ್ಷ ದಿವ್ಯ ಭವ್ಯವಾಗಿ ನಡೆಸಲು ಎಲ್ಲ ಯುವಕ ಮಂಡಳಿಯ ಯುವಕರು ರೆಡಿ ಇರುವರು.

ಮೆರವಣಿಗೆಯಲ್ಲಿ ಲೈವ್ ಪರ್ಫಾರ್ಮೆ ಮಾಡುವ ಸುಮಾರು 2000 ಜನ ಇರ್ತಾರೆ, ಮಾಧ್ಯಮದವರಿಗೆ ನನ್ನದೊಂದು ವಿನಂತಿ ಏನೆಂದರೆ ನಿಮ್ಮ ವಾಹಿನಿಯಲ್ಲಿ ಇದನ್ನು ಆದಷ್ಟೂ ಲೈವ್ ಇಟ್ಟು ರಾಜ್ಯ ಮತ್ತು ದೇಶದ ಎಲ್ಲ ಜನರು ನೋಡುವಂತೆ ಮಾಡಬೇಕು ಎಂದರು.

ಆನೆ, ಕುದುರೆ, 2000 ಜನ ಕಲಾವಿದರು ಹೀಗೆ ಲೈವ್ ಪ ತೋರಿಸುವ ಏಕೈಕ ಮೆರವಣಿಗೆ ಅಂದ್ರೆ ಅದು ಬೆಳಗಾವಿಯ ಶಿವಜಯಂತಿಯ ಮೆರವಣಿಗೆ…
ಸೀಮಿತವಾದ ಈ ಮೆರವಣಿಗೆಯನ್ನು ನೀವು ದೇಶವ್ಯಾಪಿ ತಲುಪಿಸಿದರೆ, ಈಗ ಹೇಗೆ ದಸರಾ ನೋಡಲು ಜನ ಬರುವರೋ ಅದೇ ರೀತಿ ಶಿವಜಯಂತಿ ಮೆರವಣಿಗೆ ನೋಡಲು ಬರುವರು ಎಂದರು.

ಸಚಿವ ಸಂಪುಟ ರಚನೆಯ ಬಗ್ಗೆ ಮಾತನಾಡಿದ ಅವರು, ಅದು ಆಗುವದಾಗಿದ್ದರೆ ಯಾವತ್ತೂ ಆಗುತ್ತಿತ್ತು, ಈಗ ನನಗೇನು ಅದರ ಬಗ್ಗೆ ನಂಬಿಕೆ ಇಲ್ಲ ಎಂದರು.

ಬಿಜೆಪಿ ಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ಅವರು ಪಕ್ಷದ ಸಂಘಟನಾ ಕಾರ್ಯದರ್ಶಿಯಾದ ಸಂತೋಷ್ ಜಿ ಅವರು ಪಕ್ಷದ ಹಾಗೂ ಸಮಾಜದ ಚಿಂತನೆ ಮಾಡಿಯೇ ಹೇಳಿಕೆ ನೀಡಿರುತ್ತಾರೆ,,, ಆ ಹೇಳಿಕೆಯಲ್ಲಿ ಸತ್ವ ಇರುತ್ತೆ ಎಂದರು.. ಮುಂದೆ ಕಾದು ನೋಡೋಣ ನಾಯಕತ್ವ ಬದಲಾವಣೆ ಆದರೆ ಅದರಲ್ಲಿ ಅಚ್ಚರಿ ಇಲ್ಲ ಎಂದರು.


Leave a Reply