This is the title of the web page
This is the title of the web page

Please assign a menu to the primary menu location under menu

Local News

ವಸತಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅಭಯ ಪಾಟೀಲ್


ಬೆಳಗಾವಿ: ನಗರದ ದಕ್ಷಿಣ ಭಾಗದ ಶಾಸಕರಾದ ಅಭಯ ಪಾಟೀಲ ಅವರು ಇಂದು ಮುಂಜಾನೆ ತಮ್ಮ ಕ್ಷೇತ್ರದ ಉದ್ಯಮಬಾಗದಲ್ಲಿ ಮನೆಗಳ ನಿರ್ಮಾಣಕ್ಕಾಗಿ ಭೂಮಿ ಪೂಜೆ ಮಾಡಿದರು.

ಪ್ರಧಾನಮಂತ್ರಿ ಆವಾಸ ಯೋಜನೆಯಡಿ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ತಮ್ಮ ಮತಕ್ಷೇತ್ರದ ವಸತಿರಹಿತರಿಗೆ ವಸತಿ ಸೌಲಭ್ಯ ವದಗಿಸುವ ಸಲುವಾಗಿ, ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದರು.

ಈ ವೇಳೆ ಮಾತನಾಡಿದ ಶಾಸಕರು ಸುಮಾರು 240 ಮನೆಗಳ ನಿರ್ಮಾಣ ಕಾರ್ಯಕ್ಕೆ ಇವತ್ತು ಭೂಮಿಪೂಜೆ ಮಾಡಲಾಗಿದೆ,, ಸುಮಾರು 2013 ರಲ್ಲೇ ನಗರದ ಹಲವಾರು ಜನರು ಪಾಲಿಕೆಗೆ ಹಣ ತುಂಬಿದ್ದರು, ಅವರ ಕನಸು ಇವತ್ತು ನನಸಾಗುತ್ತಿದೆ.

2013 ನಂತರ ಬೇರೆ ಶಾಸಕರು ಬಂದ ನಂತರ ಈ ವಸತಿ ಯೋಜನೆ ನೆನೆಗುದಿಗೆ ಬಿದ್ದಿತ್ತು,, ಆದರೆ ಇವತ್ತು ಮತ್ತೆ ಈ ಯೋಜನೆಗೆ ಚಾಲನೆ ದೊರಕಿದ್ದು ಸಂತೋಷವಾಗಿದೆ ಎಂದರು.

ಇನ್ನು 15 ತಿಂಗಳಲ್ಲಿ ಈ ವಸತಿ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ, ಈ ಹಿಂದೆ ಮನೆ ಹಂಚಿಕೆಯಲ್ಲಿ ಆದ ಯಾವ ಗೊಂದಲವೂ ಇಲ್ಲಿ ಆಗುವದಿಲ್ಲ, ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಮನೆ ವಿತರಿಸುವ ಕಾರ್ಯ ಆಗುತ್ತದೆ ಎಂದು ಹೇಳಿದರು.

ಈಗಾಗಲೇ ವಸತಿ ಸಲುವಾಗಿ ಸರ್ಕಾರಕ್ಕೆ ಹಣ ಪಾವತಿ ಮಾಡಿದ ಸಾರ್ವಜನಿಕರೇ ಇಲ್ಲಿ ಪಾಲಾನುಭವಿಗಳಾಗುತ್ತಾರೆ ಎಂದರು.

ಈ ವೇಳೆ ಶಾಸಕರಾದ ಅಭಯ ಪಾಟೀಲ, ಪಾಲಿಕೆ ಆಯುಕ್ತರಾದ ರುದ್ರೇಶ್ ಗಾಳಿ, ಉಪ ಆಯುಕ್ತರಾದ ಹುಗ್ಗಿ ಮೇಡಂ, ಸ್ಥಳೀಯ ನಗರಸೇವಕರು, ಪಾಲಿಕೆ ಸಿಬ್ಬಂದಿ, ಸ್ಥಳೀಯ ನೂರಾರು ಸಾರ್ವನಿಕರು ಉಪಸ್ಥಿತರಿದ್ದರು.


Gadi Kannadiga

Leave a Reply