This is the title of the web page
This is the title of the web page

Please assign a menu to the primary menu location under menu

e-paper

ಧರ್ಮದ ಮಾರ್ಗದಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಿ : ಅಭಿನವ ಡಾ.ಸಿದ್ಧರಾಮೇಶ್ವರ ಮಹಾಸ್ವಾಮಿ


ವಿಜಯಪುರ : ಧರ್ಮದ ಮಾರ್ಗದಲ್ಲಿ ನಡೆಯುವ ಮೂಲಕ ಮನುಷ್ಯರು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಕವಲಗಿ ಗುರುಪೀಠದ ಜಗದ್ಗುರು ಶಿವಯೋಗಿ ಸಿದ್ಧರಾಮೇಶ್ವರ ಕುಡುಒಕ್ಕಲಿಗ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಅಭಿನವ ಡಾ.ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಹೇಳಿದರು.
ಜುಮನಾಳ ಗ್ರಾಮದಲ್ಲಿ ಈಚೆಗೆ ಶ್ರೀ ಕಂಬುದರಾಯ ದೇವಸ್ಥಾನದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಅವರು ಆರ್ಶೀವಚನ ನೀಡಿ, ಮಾತನಾಡಿದರು.
ಪೂಜೆ, ಪುನಸ್ಕಾರ, ದೇವರ ಸೇವೆಯಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಒಳ್ಳೆಯ ಸಂಸ್ಕಾರವAತರಾಗಿ ಬಾಳಿದರೆ ತಮಗೂ ಹಾಗೂ ಕಾಲಕಾಲಕ್ಕೆ ಮಳೆ ಬೆಳೆಯಾಗಿ ದೇಶಕ್ಕೂ ಒಳಿತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಧರ್ಮ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಒಳಿತಾಗುತ್ತದೆ ಎಂದು ಅವರು ಹೇಳಿದರು.
ನಂತರ ಮಾಜಿ ಶಾಸಕ ರಾಜು ಆಲಗೂರ ಅವರು ಮಾತನಾಡಿ ಭಾರತ ದೇಶದ ಮೂಲ ಬೇರುಗಳು ಗ್ರಾಮಗಳಲ್ಲಿದ್ದು, ಜಾತ್ರೆ, ಉತ್ಸವದಂತಹ ಕಾರ್ಯಕ್ರಮಗಳಿಂದ ಭಾರತೀಯ ಪುರಾತನ ಸಂಸ್ಕೃತಿ ಇಲ್ಲಿ ಇನ್ನೂ ಜೀವಂತವಾಗಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಗ್ರಾಮಕ್ಕೂ ಒಳಿತಾಗುತ್ತದೆ. ಇದನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಿರಣ ಕಾಕಾ ಜೋಶಿ, ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಸಾಬು ಮಾಶ್ಯಾಳ, ಬಸನಗೌಡ ಬಗಲಿ, ಡಿ.ಎಲ್ ಚವ್ಹಾಣ, ಚಿದಾನಂದ ಚಲವಾದಿ, ಭೀಮನಗೌಡ ನಿಂಬರಗಿ, ಮಲ್ಲಿಕಾರ್ಜುನ ಸಂಕಗೊAಡ, ರಾಯಗೊಂದ ಶಿರಗಾಬರಗಾ, ಅಣ್ಣಪ್ಪ ಶಿರಗಾಬರಗಾ,  ಚಂದ್ರಶೇಖರ ರಾ.ಶಿರಗಾಬರಗಾ, ಸಂತೋಷ.ಕೃ. ಬಗಲಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಗ್ರಾಮದ ಹಿರಿಯರಾದ ಸಾಹೇಬಗೌಡ ಬಗಲಿ ಸ್ವಾಗತಿಸಿ, ವಂದಿಸಿದರು.


Gadi Kannadiga

Leave a Reply