This is the title of the web page
This is the title of the web page

Please assign a menu to the primary menu location under menu

Local News

ಲಂಚ ಸ್ವೀಕಾರ: ಸವದತ್ತಿ ಬಿಇಒ ಕಚೇರಿ ಸಿಬ್ಬಂದಿ ಎಸಿಬಿ ಬಲೆಗೆ


ಬೆಳಗಾವಿ,ಏ.೦೭: ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ನಮೂದಾಗಿದ್ದ ಹೆಸರುಗಳನ್ನು ತಿದ್ದುಪಡಿಗೊಳಿಸಲು ೧೨೦೦ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದ್ವಿತೀಯ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಹಿರೇಬುದನೂರ ಗ್ರಾಮದ ಮಹಾಂತೇಶ ಚಂದ್ರಪ್ಪ ಬೂತನವರ, ಮಾರುತಿಗೌಡ ಮಹಾದೇವಗೌಡ ಪಾಟೀಲ ಇವರ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ತಿದ್ದುಪಡಿಗೊಳಿಸಲು ೧೨೦೦ ಲಂಚಕ್ಕೆ ಬೇಡಿಕೆ ಇಟ್ಟಾಗ ಇಬ್ಬರೂ ಬೆಳಗಾವಿಯ ಎಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಏಪ್ರಿಲ್೬ ರಂದು ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಮಹಾಂತೇಶ ಬೂತನವರ, ಮಾರುತಿಗೌಡ ಪಾಟೀಲ ಕಡೆಯಿಂದ ೧೦೦೦ ಲಂಚ ಪಡೆದುಕೊಳ್ಳುತ್ತಿರುವಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದ್ವಿತೀಯ ದರ್ಜೆ ಸಹಾಯಕ ನೇರವಾಗಿ ಸಿಕ್ಕಿ ಬಿದ್ದಿದ್ದಾರೆ.
ಬೆಳಗಾವಿ ಉತ್ತರ ವಲಯದ ಭ್ರಷ್ಟಾಚಾರ ನಿಗ್ರಹ ದಳದÀ ಪೊಲೀಸ್ ಅಧೀಕ್ಷಕರಾದ ಬಿ.ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಜೆ.ಎಮ್.ಕರುಣಾಕರ ಶೇಟ್ಟಿ ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸ್ ನಿರೀಕ್ಷಕರಾದ ಎ.ಎಸ್.ಗುದಿಗೊಪ್ಪ, ಎಸಿಬಿ ಪೊಲೀಸ್ ಠಾಣೆಯ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆಪಾದಿತನಿಂದ ಲಂಚದ ಹಣವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply