This is the title of the web page
This is the title of the web page

Please assign a menu to the primary menu location under menu

State

ಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ


ಕುಷ್ಟಗಿ ನಗರ ಹಾಗೂ ತಾಲೂಕಿನ ವಿವಿಧ ಆಡಳಿತಾತ್ಮಕ ಸಮಸ್ಯೆಗಳ ಕುರಿತು, ಸಾರ್ವಜನಿಕ ವಲಯದಿಂದ ಕುಂದು ಕೊರತೆ ಹಾಗೂ ದೂರುಗಳ ಸಲ್ಲಿಕೆ ಕುರಿತಂತೆ, ಇಲ್ಲಿನ ಒಟ್ಟು ಒಂಬತ್ತು ಸಾರ್ವಜನಿಕ ದೂರುಗಳು ದಾಖಲಾಗಿವೆ.

ಸದ್ರಿ ಲೋಕಾಯುಕ್ತ ದೂರು- ಅಹವಾಲು ಸ್ವೀಕಾರ ಭೇಟಿ ಅಭಿಯಾನ ಕುರಿತಂತೆ ಮಾಹಿತಿ ನೀಡಿದ ಕೊಪ್ಪಳ ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಪ್ಪ ಮಾತನಾಡಿ, ಕುಷ್ಟಗಿ ತಾಲೂಕಿನ ಆಡಳಿತ ಹಾಗೂ ಕರ್ತವ್ಯ ಲೋಕಕ್ಕೆ ಸಂಬಂಧಪಟ್ಟಂತೆ ಐದು ಇಲಾಖೆಗಳ 9 ದೂರುಗಳು ದಾಖಲಾಗಿವೆ ಎಂದು ತಿಳಿಸಿದರು. ಪುರಸಭೆ-5, ಕೃಷಿ-1, ತೋಟಗಾರಿಕೆ-1, ಕಂದಾಯ ಇಲಾಖೆ-2 ಮತ್ತು ಒಂದು ಜಿಲ್ಲಾ ಪಂಚಾಯತ್ ಇಲಾಖೆಗೆ ಸಂಬಂಧಪಟ್ಟ ದೂರುಗಳ ದಾಖಲಾದ ಬಗ್ಗೆ ಮಾಹಿತಿ ನೀಡಿದರು..

ಈ ಸಂದರ್ಭದಲ್ಲಿ ಜಿಲ್ಲಾ ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳಾದ ರಾಮಣ್ಣ ಬನ್ನಿಗೋಳ, ಗುರುಪ್ರಸಾದ ದೇಶಪಾಂಡೆ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.


Gadi Kannadiga

Leave a Reply