This is the title of the web page
This is the title of the web page

Please assign a menu to the primary menu location under menu

State

ಅಪಘಾತ ರಹಿತ ಸುರಕ್ಷಿತ ಚಾಲನೆ ತರಬೇತಿ ಕಾರ್ಯಾಗಾರ


ಸಂಕೇಶ್ವರ: ಹಲವಾರು ವೈರುಧ್ಯಗಳ ನಡುವೆಯೂ
ಸಾರ್ವಜನಿಕರಿಗೆ ಸುರಕ್ಷಿತ ಪ್ರಯಾಣದ ವ್ಯವಸ್ಥೆ ಕಲ್ಪಿಸುವಲ್ಲಿ ಸಾರಿಗೆ ಸಂಸ್ಥೆಯ ಚಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಸಂಕೇಶ್ವರ ಪೋಲೀಸ್ ವೃತ್ತ ನಿರೀಕ್ಷಕ ಎಂ. ಆರ್. ತಹಶೀಲ್ದಾರ ಹೇಳಿದ್ದಾರೆ.

ನಗರದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಚಾಲಕರಿಗೆ ಆಯೋಜಿಸಿದ್ದ  ದಲ್ಲಿ ಅವರು ಮಾತನಾಡುತ್ತಿದ್ದರು.

ಅಪಘಾತಗಳನ್ನು ತಡೆಯಲು ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರು ಸಂಚಾರ ನಿಯಮಗಳ ಪಾಲನೆ ಮಾಡುವುದು ಅವಶ್ಯ. ಬೇರೆ ವಾಹನಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಅಪಘಾತ ಸಂಭವಿಸಿದಾಗ ಕೂಡಲೆ 108 ಕ್ಕೆ ಕರೆ ಮಾಡಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲು ಕ್ರಮ ವಹಿಸಬೇಕು. ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಕೇಂದ್ರ ಕಚೇರಿಯ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಹೆಚ್. ರಾಮನಗೌಡರ ಮಾತನಾಡಿ ಸುರಕ್ಷಿತ ಚಾಲನೆಗೆ ಸಾರಿಗೆ ಸಿಬ್ಬಂದಿ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ಆರೋಗ್ಯದ ಕಾಳಜಿ ವಹಿಸಬೇಕು. ದುಷ್ಚಟಗಳಿಂದ ದೂರವಿರಬೇಕು. ಏಕಾಗ್ರತೆಯಿಂದ ವಾಹನ ಚಾಲನೆ ಮಾಡಬೇಕು. ಚಾಲನಾ ಸಮಯದಲ್ಲಿ ಮೊಬೈಲ್ ಬಳಕೆ ಮಾಡವುದು ನಾವಾಗಿಯೇ ಅಪಘಾತಕ್ಕೆ ಅಹ್ವಾನ ನೀಡಿದಂತೆ. ಸುರಕ್ಷತೆಯ ನಂಬಿಕೆಯಿಂದ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ನ್ಯಾಯವಾದಿ ಎಂ.ಬಿ.ಪಾಟೀಲ್ ಮಾತನಾಡಿ ಬಸ್ ಅಪಘಾತ ಸಂಭವಿಸಿದಾಗ ಸ್ಥಳದಲ್ಲಿನ ಪೂರಕ ಸಾಕ್ಷಧಾರಗಳು ಹಾಗೂ ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳನ್ನು ಸಂಗ್ರಹಿಸಿಕೊಳ್ಳಬೇಕು.
ಇದರಿಂದ ಪರಿಹಾರ ಪಡೆಯುವ ಉದ್ದೇಶದಿಂದ ಸಂಸ್ಥೆಯ ಚಾಲಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.

ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ಬೋರಯ್ಯ ಮಾತನಾಡಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಭವಿಸಿದ ಅಪಘಾತಗಳ ಮಾಹಿತಿ ನೀಡಿ ಕೋಟ್ಯಾಂತರ ರೂ.ಗಳಷ್ಟು ಅಪಘಾತ ಪರಿಹಾರ ನೀಡಲಾಗುತ್ತಿದೆ. ಅಪಘಾತಗಳನ್ನು ನಿಯಂತ್ರಿಸಿದರೆ ಈ ಮೊತ್ತವನ್ನು ನೌಕರರ ಕ್ಷೇಮಾಭಿವೃಧ್ದಿಗೆ ಬಳಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇತ್ತೀಚೆಗೆ ಸಂಭವಿಸಿದ ಕೆಲ ಅಪಘಾತಗಳ ವೀಡಿಯೋ ಕ್ಲಿಪ್ಪಿಂಗ್ ಗಳನ್ನು ಪ್ರದರ್ಶಿಸಿ ತಜ್ಞರಿಂದ ವಿಶ್ಲೇಷಣೆ ಮಾಡಲಾಯಿತು.

ಬೆಳಗಾವಿಯ ನಾಲ್ಕು ಡಿಪೊಗಳು,ಖಾನಾಪುರ,ಬೈಲಹೊಂಗಲ,ರಾಮದುರ್ಗ, ಚಿಕ್ಕೋಡಿ, ಸಂಕೇಶ್ವರ, ಗೋಕಾಕ, ಅಥಣಿ, ರಾಯಭಾಗ, ಹುಕ್ಕೇರಿ ಡಿಪೊಗಳಿಂದ ಬಂದಿದ್ದ ಚಾಲಕರುಗಳು ಭಾಗವಹಿಸಿದ್ದರು.

ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಂ. ಶಶಿಧರ, ವಿಭಾಗೀಯ ಸಂಚಾರ ಅಧಿಕಾರಿಗಳಾದ ಕೆ.ಕೆ.ಲಮಾಣಿ,ಆರ್.ಪಿ. ವಾಜಂತ್ರಿ ಮತ್ತಿತರರು ಇದ್ದರು.

ಸಂಕೇಶ್ವರ: ಹಲವಾರು ವೈರುಧ್ಯಗಳ ನಡುವೆಯೂ
ಸಾರ್ವಜನಿಕರಿಗೆ ಸುರಕ್ಷಿತ ಪ್ರಯಾಣದ ವ್ಯವಸ್ಥೆ ಕಲ್ಪಿಸುವಲ್ಲಿ ಸಾರಿಗೆ ಸಂಸ್ಥೆಯ ಚಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಸಂಕೇಶ್ವರ ಪೋಲೀಸ್ ವೃತ್ತ ನಿರೀಕ್ಷಕ ಎಂ. ಆರ್. ತಹಶೀಲ್ದಾರ ಹೇಳಿದ್ದಾರೆ.

ನಗರದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಚಾಲಕರಿಗೆ ಆಯೋಜಿಸಿದ್ದ ಅಪಘಾತ ರಹಿತ ಸುರಕ್ಷಿತ ಚಾಲನೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.

ಅಪಘಾತಗಳನ್ನು ತಡೆಯಲು ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರು ಸಂಚಾರ ನಿಯಮಗಳ ಪಾಲನೆ ಮಾಡುವುದು ಅವಶ್ಯ. ಬೇರೆ ವಾಹನಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಅಪಘಾತ ಸಂಭವಿಸಿದಾಗ ಕೂಡಲೆ 108 ಕ್ಕೆ ಕರೆ ಮಾಡಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲು ಕ್ರಮ ವಹಿಸಬೇಕು. ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಕೇಂದ್ರ ಕಚೇರಿಯ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಹೆಚ್. ರಾಮನಗೌಡರ ಮಾತನಾಡಿ ಸುರಕ್ಷಿತ ಚಾಲನೆಗೆ ಸಾರಿಗೆ ಸಿಬ್ಬಂದಿ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ಆರೋಗ್ಯದ ಕಾಳಜಿ ವಹಿಸಬೇಕು. ದುಷ್ಚಟಗಳಿಂದ ದೂರವಿರಬೇಕು. ಏಕಾಗ್ರತೆಯಿಂದ ವಾಹನ ಚಾಲನೆ ಮಾಡಬೇಕು. ಚಾಲನಾ ಸಮಯದಲ್ಲಿ ಮೊಬೈಲ್ ಬಳಕೆ ಮಾಡವುದು ನಾವಾಗಿಯೇ ಅಪಘಾತಕ್ಕೆ ಅಹ್ವಾನ ನೀಡಿದಂತೆ. ಸುರಕ್ಷತೆಯ ನಂಬಿಕೆಯಿಂದ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ನ್ಯಾಯವಾದಿ ಎಂ.ಬಿ.ಪಾಟೀಲ್ ಮಾತನಾಡಿ ಬಸ್ ಅಪಘಾತ ಸಂಭವಿಸಿದಾಗ ಸ್ಥಳದಲ್ಲಿನ ಪೂರಕ ಸಾಕ್ಷಧಾರಗಳು ಹಾಗೂ ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳನ್ನು ಸಂಗ್ರಹಿಸಿಕೊಳ್ಳಬೇಕು.
ಇದರಿಂದ ಪರಿಹಾರ ಪಡೆಯುವ ಉದ್ದೇಶದಿಂದ ಸಂಸ್ಥೆಯ ಚಾಲಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.

ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ಬೋರಯ್ಯ ಮಾತನಾಡಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಭವಿಸಿದ ಅಪಘಾತಗಳ ಮಾಹಿತಿ ನೀಡಿ ಕೋಟ್ಯಾಂತರ ರೂ.ಗಳಷ್ಟು ಅಪಘಾತ ಪರಿಹಾರ ನೀಡಲಾಗುತ್ತಿದೆ. ಅಪಘಾತಗಳನ್ನು ನಿಯಂತ್ರಿಸಿದರೆ ಈ ಮೊತ್ತವನ್ನು ನೌಕರರ ಕ್ಷೇಮಾಭಿವೃಧ್ದಿಗೆ ಬಳಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇತ್ತೀಚೆಗೆ ಸಂಭವಿಸಿದ ಕೆಲ ಅಪಘಾತಗಳ ವೀಡಿಯೋ ಕ್ಲಿಪ್ಪಿಂಗ್ ಗಳನ್ನು ಪ್ರದರ್ಶಿಸಿ ತಜ್ಞರಿಂದ ವಿಶ್ಲೇಷಣೆ ಮಾಡಲಾಯಿತು.

ಬೆಳಗಾವಿಯ ನಾಲ್ಕು ಡಿಪೊಗಳು,ಖಾನಾಪುರ,ಬೈಲಹೊಂಗಲ,ರಾಮದುರ್ಗ, ಚಿಕ್ಕೋಡಿ, ಸಂಕೇಶ್ವರ, ಗೋಕಾಕ, ಅಥಣಿ, ರಾಯಭಾಗ, ಹುಕ್ಕೇರಿ ಡಿಪೊಗಳಿಂದ ಬಂದಿದ್ದ ಚಾಲಕರುಗಳು ಭಾಗವಹಿಸಿದ್ದರು.

ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಂ. ಶಶಿಧರ, ವಿಭಾಗೀಯ ಸಂಚಾರ ಅಧಿಕಾರಿಗಳಾದ ಕೆ.ಕೆ.ಲಮಾಣಿ,ಆರ್.ಪಿ. ವಾಜಂತ್ರಿ ಮತ್ತಿತರರು ಇದ್ದರು.


Gadi Kannadiga

Leave a Reply