ಬೆಳಗಾವಿ :- ಮೊದಲ ವ್ಯವಸಾಯ ರಂಗಭೂಮಿ ಅಲ್ಲದೇ ರಂಗಗೀತೆ ಹುಟ್ಟಿದ್ದು ಬೆಳಗಾವಿ ಜಿಲ್ಲೆಯಲ್ಲಿ ಎಂದು ರಂಗಸಂಪದದ ಸಂಸ್ಥಾಪಕರಾದ ಶ್ರೀಪತಿ ಮಂಜನಬೈಲು ಇಂದಿಲ್ಲಿ ಹೇಳಿದರು.
ನಗರದ ರಂಗಸಂಪದದವರು ಮೂರು ದಿನಗಳ ಕಾಲ ‘ಶರತ್ ನಾಟಕೋತ್ಸವ’ ಹಮ್ಮಿಕೊಂಡಿದ್ದಾರೆ. ಪ್ರಥಮ ದಿನವಾದ ಇಂದು ತಿಲಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದರದಲ್ಲಿ ಹಾಸನದ ರಂಗಹೃದಯದವರು ‘ತಾಯಿಯಾಗುವುದೆಂದರೆ’ ಏಕವ್ಯಕ್ತಿ ರಂಗಪ್ರದರ್ಶನವನ್ನು ನೀಡಿದ ಸಂದರ್ಭದಲ್ಲಿ ಉದ್ಘಾಟಿಸಿದ ಶ್ರೀಪತಿಯವರು ಮೇಲಿನಂತೆ ಹೇಳಿದರು.
ಮುಂದೆ ಮಾತನಾಡುತ್ತ ಶ್ರೀಪತಿ ಅವರು ಮೊದಲ ವ್ಯವಸಾಯ ರಂಗಭೂಮಿ ಹುಟ್ಟಿದುದು ಬೆಳಗಾವಿಯಲ್ಲಿ. ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಹಲಸಿಯಲಿ.್ಲ. ೧೮೬೯ ರಲ್ಲಿ ಹಲಸಿ ನಾಟಕ ಮಂಡಳಿಯನ್ನು ವೆಂಕಣ್ಣಾಚಾರ್ಯ ಅಗಲಗಟ್ಟಿ ಹಾಗೂ ಕಿತ್ತೂರಿನ ಪಾಂಗ್ರಿ ಆಚಾರ್ಯ ಎನ್ನುವವರು ಪ್ರಾರಂಭಿಸಿದರು. ಇದು ಬೆಳಗಾವಿಯವರಾದ ನಾವೆಲ್ಲ ತಿಳಿದಿರಬೇಕಾದ ವಿಷಯ ಹಾಗೂ ಅಭಿಮಾನ ಪಡುವಂತಹ ವಿಷಯ ಎಂದು ಹೇಳಿದರು.
ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡಿ ರಂಗಸಂಪದ ವೈವಿಧ್ಯಮಯ ನಾಟಕಗಳನ್ನ ಕೊಡುತ್ತ ಬಂದಿದೆ. ನಮಗೆ ಪ್ರಾಯೋಜಕರ ಸಹಕಾರ ತುಂಬವಿದೆ. ನಾವು ಒಳ್ಳಯದನ್ನೇ ಮಾಡುತ್ತೆಂಬ ವಿಶ್ವಾಸ ಅವರಿಗಿದೆ. ಅವರ ಇಟ್ಟುಕೊಂಡಿರುವ ವಿಶ್ವಾಸವನ್ನು ನಾವು ಉಳಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ಇಂದು ಪ್ರದರ್ಶನಗೊಂಡ ‘ತಾಯಿಯಾಗುವುದೆಂದರೆ’ ಏಕವ್ಯಕ್ತಿ ರಂಗಪ್ರದರ್ಶನದ ರಂಗರೂಪ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಕೃಷ್ಣಮೂರ್ತಿ ಕವತ್ತಾರ ಅವರದಾಗಿತ್ತು. ಪೂಜಾ ರಘುನಂದನ ತಮ್ಮ ನಿಜಕಥೆಯನ್ನೇ ರಂಗರೂಪ ತಂದಿದ್ದಾರೆ. ಪೂಜಾ ಅವರ ನೈಜ ಅಭಿನಯ ಪ್ರೇಕ್ಷರನ್ನು ಮಂತ್ರಮುಗ್ಧರನ್ನಾಗಿಸಿತು.
Gadi Kannadiga > Local News > ಮೊದಲ ರಂಗಸಂಗೀತ ಹುಟ್ಟಿದ್ದು ಬೆಳಗಾವಿಯಲ್ಲಿ ರಂಗ ಸಂಪದದÀ ‘ಶರತ್ ನಾಟಕೋತ್ಸವ’ದಲ್ಲಿ ಶ್ರೀಪತಿ ಮಂಜನಬೈಲು ಅವರ ಅಭಿಪ್ರಾಯ
ಮೊದಲ ರಂಗಸಂಗೀತ ಹುಟ್ಟಿದ್ದು ಬೆಳಗಾವಿಯಲ್ಲಿ ರಂಗ ಸಂಪದದÀ ‘ಶರತ್ ನಾಟಕೋತ್ಸವ’ದಲ್ಲಿ ಶ್ರೀಪತಿ ಮಂಜನಬೈಲು ಅವರ ಅಭಿಪ್ರಾಯ
Suresh08/10/2022
posted on

More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023