This is the title of the web page
This is the title of the web page

Please assign a menu to the primary menu location under menu

State

ಇಸಕ್ಕಿ ಆಸೆ ಎಮಗೆಕೆ ಎಂದು ಕೇಳುವ ಆಯ್ದಕ್ಕಿ ಲಕ್ಕಮ್ಮ  ಅಚಲ ಭಕ್ತಿ ಕಾಯಕ ನಿಷ್ಠಳು-ವಸಂತಕ್ಕ ಗಡ್ಕರಿ


ಬೆಳಗಾವಿ: ಇಸಕ್ಕಿ ಆಸೆ ಎಮಗೆಕೆ ಎಂದು ಕೇಳುವ ಲಕ್ಕಮ್ಮನ ಅಚಲ ಭಕ್ತಿ ಕಾಯಕ ನಿಷ್ಠೆ ಶರಣರಲ್ಲಿರುವ ಛಲ ಲಕ್ಕಮ್ಮನಲ್ಲಿ ಎದ್ದು ತೋರುತ್ತದೆ ಎಂದು ವಸಂತಕ್ಕ ಗಡ್ಕರಿ ಹೇಳಿದರು.
ಅವರು ಶ್ರಾವಣ ಮಾಸದ ನಿಮಿತ್ತವಾಗಿ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಅವರ  ವಚನ ಸಾರ ವಚನೋತ್ಸವ ಮನೆಮನೆಗಳಲ್ಲಿ ಮನಮನಂಗಳಿಗೆ ಕಾರ್ಯಕ್ರಮವು ಇತ್ತೀಚೆಗೆ ಶರಣ ಪ್ರಭು ಮುಗಳಿ ಹಾಗೂ ಜಯಶ್ರೀ ಮುಗಳಿ ಅವರ ಮನೆಯಲ್ಲಿ ನೆರವೇರಿತು.
ವಸಂತಕ್ಕಾ ಗಡ್ಕರಿ  ಅವರು ಶರಣೆ ಆಯ್ದಕ್ಕಿ ಲಕ್ಕಮ್ಮ ಕುರಿತು ಉಪನ್ಯಾಸ ನೀಡಿ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸ್ತ್ರೀ ಯರಿಗೆ ಕೊಟ್ಟ ಸ್ವಾತಂತ್ರ್ಯದ ಸಧ್ಭಳಿಕೆಯನ್ನು ಮಾಡಿಕೊಂಡ ಶರಣೆಯರಲ್ಲಿ ಲಕ್ಕಮ್ಮನು ಒಬ್ಬಳು ಇವಳ ಆಯ್ದಕ್ಕಿ ಮಾರಯ್ಯನವರ ಧರ್ಮ ಪತ್ನಿ . ಇವಳು ಕಾಯಕ ನಿಷ್ಠೆ, ಸಮಯ ಪ್ರಜ್ಞೆ, ಸ್ವಾಭಿಮಾನದ ಸೂಕ್ಷ್ಮಮತಿಯವಳಾಗಿದ್ದಳು, ಮಾರಯ್ಯನವರಿಗೆ ಮಾರ್ಗದರ್ಶಕಳಾಗಿದ್ದಳು ಶರಣ ತತ್ವಗಳನ್ನು ನಿಷ್ಟೆಯಿಂದ ಪಾಲಿಸುತಿದ್ದಳು ಯಾರ ಹಂಗವು ಇಲ್ಲದೆ ಬದುಕುವ  ಛಲ ಹೊಂದಿದ್ದಳು ಹೀಗಾಗಿ ಪತಿಯನ್ನು ಸದಾ ಎಚ್ಚರಿಸು ಪರಿಯು ಆವಳ ವಚನಗಳಲ್ಲಿ ಕಂಡು ಬರುತ್ತದೆ. “ಕಾಯಕ ನಿಂದಿತ್ತು ಹೋಗಯ್ಯ ಮಾರಯ್ಯ ಎನ್ನಾಳ್ದನೆ”, “ಒಮ್ಮನವ ಮೀರಿ ಇಮ್ಮನವ ತಂದಿರಿ ಇದು ನಿಮ್ಮ ಮನವೂ ಬಸವಣ್ಣನ ಅನುಮಾನದ ಚಿತ್ತವೂ”  “ಘನ ಶಿವ ಭಕ್ತರಿಗೆ ಬಡತನವಿಲ್ಲ” “ಆಸೆ ಎಂಬುದು ಅರಸಂಗಲ್ಲದೆ ಶಿವ ಭಕ್ತರಿಗುಂಟೆ “? ರೋಷವೆಂಬುದು ಯಮದೂತರಿಗುಂಟು ಅಜಾತರಿಗುಂಟೆ ?ಇಸಕ್ಕಿ ಆಸೆ ಎಮಗೆಕೆ ಎಂದು ಕೇಳುವ ಲಕ್ಕಮ್ಮನ ಅಚಲ ಭಕ್ತಿ ಕಾಯಕ ನಿಷ್ಠೆ ಶರಣರಲ್ಲಿರುವ ಛಲ ಲಕ್ಕಮ್ಮನಲ್ಲಿ ಎದ್ದು ತೋರುತ್ತದೆ ಎಂದು ಹೇಳಿದರು.
ಕಾರ್ಯಕ್ರದ ದಿವ್ಯ ಸಾನ್ನಿಧ್ಯವನ್ನು ಪೂಜ್ಯ  ಮೃತ್ಯುಂಜಯ ಹಿರೇಮಠ ಗಂದಿಗವಾಡ ಗುರುಗಳು  ಆಶೀರ್ವಚನ ನೀಡಿ ಶರಣರು  ಎಂದಿಗೂ ಸಂಗ್ರಹಿಸಿ ಇಡುವುದನ್ನು ಒಪ್ಪಿದವರಲ್ಲ, ಅವರು ಕಾಯಕದಲ್ಲಿ ನಿರತನಾದಡೆ ಗುರುಲಿಂಗ ಜಂಗಮವಾದರು ಮರೆಯಬೇಕು  ತನ್ನ ಕಾಯಕವನ್ನೇ ತಾನೇ ಮಾಡಬೇಕು ಅಲ್ಲದೆ ಕಾಯಕದಿಂದ ಬಂದುದನ್ನು ತನಗೆ ಬಳಸಿ ಮಿಕ್ಕಿದ್ದನ್ನು ದಾಸೋಹಕ್ಕೆ ಬಳಸುತ್ತಿದ್ದರು ಹೊರತು ಕೂಡಿಸಿ ಇಡುತಿದ್ದಿಲ್ಲ, ಶರಣರು ಶಿವಯೋಗ ಸಾಧನೆಯಿಂದ ಹೃದಯ ಶ್ರಿಮಂತರಾಗಿದ್ದರು ಭಕ್ತಿಯಲ್ಲಿ ಶ್ರಿಮಂತರಾಗಿದ್ದರು ಅವರು ಯಾವುದೇ ಆಸೆ ನಿರಾಸೆ ನೋವು ದುಃಖ್ಖ ಸುಖ ಸಂತೋಷ ಇವುಗಳನೆಲ್ಲ ಮಿರಿ ಹೃದಯ ಶ್ರೀಮಂತಿಕೆಯಲಿ ಭಕ್ತಿ ನಿಷ್ಠೆ ಕಾಯಕ ಶ್ರೀಮಂತಿಕೆಯಲ್ಲಿ ಇದ್ದವರು ಇವು ಜೀವನದಲ್ಲಿ ನಿಜವಾದ ಆನಂದವನ್ನು ಕೊಡುತ್ತವೆ ಕ್ಷಣಿಕ ಆಸೆಗಳನ್ನು ಬಿಟ್ಟು ಶರಣರ ನಡೆದು ಬಂದ ದಾರಿಯನ್ನು ಸರಿಯಾಗಿ ಅರ್ಥೈಸಿಕೊಂಡು ಆ ಮಾರ್ಗದಲ್ಲಿ ನಡೆಯಬೇಕೆಂದು ಆಶೀರ್ವಚನ ನೀಡಿದರು.
 ಅಧ್ಯಕ್ಷರು ಎಸ್ ಜಿ ಸಿದ್ನಾಳರ ಉಪಸ್ಥಿತರಿದ್ದರು, ಶರಣ ಕಟ್ಟಿಮನಿ ಅವರು ನಿರೂಪಣೆ ಮಾಡಿದರು, ಶೋಭಾ ಶಿವಳ್ಳಿ ಸುನಿತಾ ನಂದೆಣ್ಣವರ ಪ್ರಾರ್ಥನೆ ನಡೆಸಿಕೊಟ್ಟರು,  ಶರಣರಾದ ಶಂಕರ ಶೆಟ್ಟಿ ,ಸಂಕೇಶ್ವರ , ಮುರಿಗೆಪ್ಪ ಬಾಳಿ,  ಮುನವಳ್ಳಿ, ಗುರಣ್ಣವರ, ಬಿ ಡಿ ಪಾಟೀಲ ಶರೆಯರಾದ ಶೈಲಜಾ, ದಾಕ್ಷಾಯಿಣಿ, ಪ್ರೇಮಾ ತ್ರಿವೇಣಿ, ಉಮಾ, ವಿಜಯ ಲಕ್ಷ್ಮಿ, ಶಾರದಾ ರೇಖಾ  ಮುಂತಾದ ಶರಣ ಶರಣೆಯರು ಉಪಸ್ಥಿತರಿದ್ದರು.

Leave a Reply