ಬೆಳಗಾವಿ: ಅಚ್ಚು ಅಳಿಯದ ವಚನ ಗುಮ್ಮಟ ಡಾ.ಪ.ಗು.ಹಳಕಟ್ಟಿಯವರು ಎಂದು ಡಾ. ನಿರ್ಮಲಾ ಬಟ್ಟಲ ಅವರು ಉಪನ್ಯಾಸ ನೀಡುತ್ತಾ ಹಳಕಟ್ಟೆಯವರು ಕಡು ಬಡತನದಲ್ಲಿ ಬದುಕನ್ನು ಸವಿಸಿದವರು ಆದರೂ ಅವರ ವಚನ ಸಾಹಿತ್ಯ ಪ್ರೀತಿ ಹಸ್ತ ಪ್ರತಿಗಳ ಶೋಧನೆ ವಚನ ಸಂಪಾದನೆ ಕಾರ್ಯ ನಮ್ಮ ಕನ್ನಡ ಸಾಹಿತ್ಯ ಸಂಸ್ಕೃತಿ ಯನ್ನು ಜಾಗತಿಕ ಮಟ್ಟದಲ್ಲಿ ನಿಲ್ಲುವಂತೆ ಮಾಡಿದೆ ಕನ್ನಡ ಶಾಲೆ ಕುಡಿಯುವ ನೀರಿಗಾಗಿ ಶ್ರಮ ಕೃಷಿ ತರಬೇತಿ ಕೇಂದ್ರ ಮುಂತಾದ ಸಮಾಜಮುಖಿ ಸೇವೆಗಳಿಗೆ ತಮ್ಮ ಬದುಕನ್ನು ಸವಿಸಿ ಕೊಂಡವರು ಎಂದು ಹೇಳಿದರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಬೆಳಗಾವಿ ಹಾಗೂ ಮಾಂತೇಶ್ ನಗರದ ಬಿ ಎಡ್ ಕಾಲೇಜಿನಲ್ಲಿ ಏರ್ಪಡಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು ಇನ್ನೋರ್ವ ಉಪನ್ಯಾಸಕರಾದ ಡಾ. ಅ.ಬ.ಇಟಗಿ ಅವರು ಆಲೂರು ವೆಂಕಟರಾಯರ ಬದುಕು ಬರಹ ಕುರಿತು ಕರ್ನಾಟಕ ಏಕೀಕರಣ ಕೂಗಿ ನೊಂದಿಗೆ ರಾಜ್ಯದ ಕನಸನ್ನು ನನಸಾಗಿಸಲು ಹೋರಾಡಿದ ದಿಮಂತ ನಾಯಕ ಆಲೂರು ವೆಂಕಟರಾಯರು ಇಂದಿಗೂ ನಮ್ಮ ನಾಡಲ್ಲಿ ಕನ್ನಡಿಗರ ಮನದಲ್ಲಿ ಒಂದು ಶಕ್ತಿಯಾಗಿ ನಿಂತಿದ್ದಾರೆ ಎಂದು ನುಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ಹಂಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಇವರು ವಹಿಸಿಕೊಂಡಿದ್ದರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ ವೈ ಮೆಣಸಿನಕಾಯಿ ಯವರು ಹಾಗೂ ಡಾ. ಸಿದ್ದಣ್ಣ ವಾಲಿಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಿರಿಯ ಸಾಹಿತಿ ಸ.ರಾ ಸುಳಕೂಡೆ ಶಿಕ್ಷಕರಾದ ದೊಡ್ಡಬಂಗಿ ,ಡಿ ಜಿ ಬೇವಿನಕೊಪ್ಪಮಠ ಕಮತಿ ಉಪಸ್ಥಿತರಿದ್ದರು ಕಾಲೇಜಿನ ಪ್ರಾಧ್ಯಾಪಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು
Gadi Kannadiga > State > ಅಚ್ಚು ಅಳಿಯದ ವಚನ ಗುಮ್ಮಟ ಡಾ.ಫ.ಗು.ಹಳಕಟ್ಟಿ- ಡಾ.ನಿರ್ಮಲಾ ಬಟ್ಟಲ
ಅಚ್ಚು ಅಳಿಯದ ವಚನ ಗುಮ್ಮಟ ಡಾ.ಫ.ಗು.ಹಳಕಟ್ಟಿ- ಡಾ.ನಿರ್ಮಲಾ ಬಟ್ಟಲ
Murugesh15/07/2023
posted on

More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023
ದನಗಳ ಮಾಲೀಕರ ಗಮನಕ್ಕೆ
22/09/2023
ನೇರ ಸಂದರ್ಶನ.
22/09/2023