ಬೆಳಗಾವಿ, ಡಿ.೧೩ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಜತ ಮಹೋತ್ಸವದ ಕೊಡುಗೆಯಾಗಿ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಪಾಸುಗಳಿಗೆ ೩೦ ದಿನಗಳಿಗೆ ಹೆಚ್ಚುವರಿಯಾಗಿ ೨ ದಿನಗಳ ಅವಧಿ ವಿಸ್ತರಣೆಯ ಆಕರ್ಷಣೆಯ ಕೊಡುಗೆಯನ್ನು ಪ್ರಯಾಣಿಕರಿಗೆ ನೀಡಲಾಗಿದ್ದು, ಮಾಸಿಕ ಬಸ್ಸು ಪಾಸುಗಳಿಗೆ ೨೦ ದಿನಗಳ ಪ್ರಯಾಣದರವನ್ನು ಪಾವತಿಸಿ ೩೨ ದಿನಗಳು ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
(“Pಂಙ ಈಔಖ ೨೦ ಆಂಙS ಖಿಖಂಗಿಇಐ ಈಔಖ ೩೨ ಆಂಙS’) ಯೋಜನೆಯು ಡಿಸೆಂಬರ್ ೧೫ ರಿಂದ ಮಾರಾಟವಾಗುವ ಮಾಸಿಕ ಪಾಸುಗಳಿಗೆ ಅನ್ವಯವಾಗುವುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾಸಿಕ ಪಾಸುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಚಿಕ್ಕೋಡಿ: ಮಾಸಿಕ ಬಸ್ ಪಾಸುಗಳಿಗೆ ಹೆಚ್ಚುವರಿ ಅವಧಿ ವಿಸ್ತರಣೆ