This is the title of the web page
This is the title of the web page

Please assign a menu to the primary menu location under menu

Local News

ಎಚ್‌ಐವಿ/ಎಡ್ಸ ಕುರಿತಾಗಿ ಸೂಕ್ತ ಜಾಗೃತಿ ಜಾತಾ


ಯರಗಟ್ಟಿ: ಎಚ್‌ಐವಿ/ಎಡ್ಸ ಕುರಿತಾಗಿ ಸೂಕ್ತ ಜಾಗೃತಿ ಸಮಾಜದಲ್ಲಿ ಇಲ್ಲದಿರುವದೇ ಸೋಂಕಿನ ಹರಡುವಿಕೆ ಹೆಚ್ಚಲು ಕಾರಣವಾಗಿದೆ ಎಂದು ಜಿಲ್ಲಾ ಉಪಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಮಾನೆ ಹೇಳಿದರು.
ಸಮೀಪದ ಮದ್ಲೂರ ಗ್ರಾಮದ ಸರಕಾರಿ ಪ್ರೌಡಶಾಲೆಯ ಸಭಾ ಭವನದಲ್ಲಿ ಇತ್ತೀಚಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಎಚ್‌ಐವಿ/ಎಡ್ಸ ಹಾಗೂ ಟಿಬಿ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್‌ಐವಿ/ಎಡ್ಸ ಸೋಂಕಿತರಲ್ಲಿ ದೇಹದ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತಾ ಹೊಗುತ್ತದೆ. ಸೋಂಕಿನ ಕೊನೆಯ ಹಂತದಲ್ಲಿ ಜೀವಾಪಾಯ ಖಚಿತ. ಈ ಸೋಂಕು ನಾಲ್ಕು ಹಂತಗಳಲ್ಲಿ ಹರಡುತ್ತದೆ.ಸೂಕ್ತ ಸುರಕ್ಷತೆ ಹಾಗೂ ಮುಂಜಾಗೃತೆ ಎಡ್ಸನಿಂದ ದೂರವಿರಬಹುದು ಎಂದರು.
ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್.ಆರ್.ಗಂಜಿ ಮಾತನಾಡಿ, ಎಡ್ಸನಿಂದ ವಿಶ್ವದಾದ್ಯಂತ ಕೋಟ್ಯಂತರ ಜನ ಸಾವಿಗೀಡಾಗಿದ್ದಾರೆ. ಸೂಕ್ತವಾದ ಚಿಕಿತ್ಸೆ ಇಲ್ಲದಿರುವದು ಮತ್ತು ಹೆಚ್ಚಾಗಿ ಈ ರೋಗ ಹರಡುವ ಬಗ್ಗೆ ಸೂಕ್ತವಾದ ಜ್ಞಾನ ಇಲ್ಲದಿರುವದು ಸಾವಿನ ಸಂಖ್ಯೆ ಎರಲು ಕಾರಣ ಈ ಕುರಿತು ಜಾಗೃತಿ ಮೂಡಿಸುವದು ಇಂದಿನ ಅಗತ್ಯಗಳಲ್ಲಿ ಪ್ರಮುಖವಾಗಿದೆ ಎಂದರು. ಡಾ. ಕಾರ್ತಿಕ ವಾಲಿ, ಹನಮಂತ ಪಚ್ಚಿನವರ, ಮಂಜುನಾಥ ಜಡಗನ್ನವರ, ಎಲ್.ಎ ಬಾಣದಾರ, ಸುರೇಶ ದೇಸನೂರ, ಆಸ್ಮಾ ಮುಲ್ಲ, ಶಿಲ್ಪಾ ಕುರಬಗಟ್ಟಿಮಠ, ಬಸವರಾಜ ಕುರಿ ಹಾಗೂ ಸಿಬ್ಬಂದಿ ಇದ್ದರು.


Gadi Kannadiga

Leave a Reply