ಕೊಪ್ಪಳ ಡಿಸೆಂಬರ್ ೦೭ : ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಡಿಸೆಂಬರ್ ೧೦ ರಂದು ನಿಗದಿಪಡಿಸಲಾಗಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಒಂದು ದಿನದ ಮಟ್ಟಿಗೆ ಮುಂದೂಡಿ, ಈ ಕಾರ್ಯಕ್ರಮವನ್ನು ಡಿ.೧೧ ರಂದು ಜರುಗಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತಿಗಳ ಮಾಹಿತಿ ಕೋಶಕ್ಕೆ ಸೇರ್ಪಡೆ, ತಿದ್ದುಪಡಿಗೆ ಅವಕಾಶ
ಕೊಪ್ಪಳ ಡಿಸೆಂಬರ್ ೦೭ : ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಂಗಾರದ ಎಲೆಗಳು- ಸಾಹಿತಿ ಮಾಹಿತಿ ಕೋಶಕ್ಕೆ ಮಾಹಿತಿಯ ಸೇರ್ಪಡೆ ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವದ ಯೋಜನೆಯಾದ ಬಂಗಾರದ ಎಲೆಗಳು- ಸಾಹಿತಿ ಮಾಹಿತಿ ಕೋಶದಲ್ಲಿ ೭೨೦೦ಕ್ಕೂ ಹೆಚ್ಚು ಸಾಹಿತಿಗಳ ಮಾಹಿತಿ ಇದ್ದು, ಈ ಮಾಹಿತಿಯು ಆಧುನಿಕ ತಂತ್ರಜ್ಞಾನದ ಮೂಲಕ ಸರ್ವರನ್ನು ತಲುಪಿಸಬೇಕೆಂಬ ಸದಾಶಯದಿಂದ ಸಾಹಿತ್ಯಾಸಕ್ತರ ಸದ್ಬಳಕೆಗಾಗಿ ೨೦೨೨ರ ಅಕ್ಟೋಬರ್ ೧೪ ರಂದು ಆನ್‌ಲೈನ್ ಮೂಲಕ ಬಿಡುಗಡೆ ಮಾಡಿ, ಅಕಾಡೆಮಿಯ ಅಂತರ್ಜಾಲ ತಿತಿತಿ.sಚಿhiಣhಥಿಚಿಚಿಛಿಚಿಜemಥಿ.ಞಚಿಡಿಟಿಚಿಣಚಿಞಚಿ.gov.iಟಿ ದಲ್ಲಿ ಈ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿರುತ್ತದೆ.
ಈ ಸಾಹಿತಿ ಮಾಹಿತಿ ಕೋಶವು ಪ್ರತಿ ವರ್ಷ ಆಯಾಯ ಕಾಲಘಟ್ಟದಲ್ಲಿ ಪರಿಷ್ಕರಣೆಗೊಳ್ಳುತ್ತಾ ಬೆಳೆಯಬೇಕೆಂಬ ಅಪೇಕ್ಷೆಯಿಂದ ಈ ಮಾಹಿತಿ ಕೋಶದಲ್ಲಿ ಯಾವುದಾದರೂ ತಿದ್ದಪಡಿಗಳಿದ್ದಲ್ಲಿ, ಹೊಸದಾಗಿ ಸೇರಿಸಬೇಕಾಗಿರುವ ಸಾಹಿತಿಗಳ ಹೆಸರುಗಳಿದ್ದಲ್ಲಿ ಸೂಕ್ತ ಮಾಹಿತಿ ಮತ್ತು ದಾಖಲೆಗಳೊಂದಿಗೆ ಅಕಾಡೆಮಿಗೆ ಕಳುಹಿಸಿಕೊಟ್ಟಲ್ಲಿ ಅದನ್ನು ಸಂಪಾದಕ ಮಂಡಳಿಯ ಮುಂದೆ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಜಿಲ್ಲಾ ಮಟ್ಟದ ಯುವಜನೋತ್ಸವ ಡಿ.೧೧ಕ್ಕೆ ಮುಂದೂಡಿಕೆ