ಬೆಳಗಾವಿ : ಬೆಳಗಾವಿಯ ವೈದ್ಯಕೀಯ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿದ್ದ ವಾಹನ ಪಲ್ಟಿಯಾದ ಘಟನೆ ಸವದತ್ತಿ ತಾಲೂಕಿನ ಯಕ್ಕೇರಿ ಗ್ರಾಮದ ಸಮೀಪ ನಡೆದಿದೆ.
ಬೆಳಗಾವಿಯಿಂದ ಗದಗ ಜಿಲ್ಲೆಗೆ ಫುಟ್ಬಾಲ್ ಟೂರ್ನ್ ಮೆಂಟ್ ನಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಈ ವೇಳೆ ಟಿಪ್ಪರ್ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ವಾಹನ ಪಲ್ಟಿ ಆಗಿದೆ.