ಬೆಳಗಾವಿ ೨೬- ಶ್ರೀ ಶಂಕರಾಚಾರ್ಯ ಸೇವಾ ಸಮಿತಿ ವಿಶ್ವಕರ್ಮ ಹೌಸಿಂಗ್ ಸೊಸೈಟಿ, ರಾಣಿ ಚೆನ್ನಮ್ಮ ನಗರ ವತಿಯಿಂದ ಮನೋಪ್ರಭ ಮಂಗಲ ಕಾರ್ಯಾಲಯದಲ್ಲಿ ಇದೇ ದಿ. ೨೫ ಮಂಗಳವಾರದಂದು ಆದ್ಯ ಶ್ರೀ ಶಂಕರಾಚಾರ್ಯ ಜನ್ಮದಿನೋತ್ಸವವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಲಘು ರುದ್ರ, ಸೌಂದರ್ಯ ಲಹರಿ ಪಾರಾಯಣ ಮತ್ತು ಶ್ರೀಮತಿ ಅಲಕ ತಾಯಿ ಇನಾಮದಾರ ಅವರಿಂದ ಶ್ರೀ ಶಂಕರಾಚಾರ್ಯರ ಕುರಿತು ಪ್ರವಚನ ಗುರುಗಳಿಗೆ ವಿಶೇಷ ಪೂಜೆ ಅಲಂಕಾರ ಮಹಾಪ್ರಸಾದವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಶಂಕರಾಚಾರ್ಯ ಸೇವಾ ಸಮಿತಿ ವಿಶ್ವಕರ್ಮ ಹೌಸಿಂಗ್ ಸೊಸೈಟಿ ರಾಣಿ ಚೆನ್ನಮ್ಮ ನಗರ ವತಿಯಿಂದ ಸಮಿತಿಯ ಉಪಾಧ್ಯಕ್ಷ ವಿಲಾಸ ಬದಾಮಿ ರುದ್ರಾಭಿಷೇಕವನ್ನು ನೆರವೇರಿಸಿಕೊಟ್ಟರು
ಅಪಾರ ಸಂಖ್ಯೆಯಲ್ಲಿ ಬಂದು ಭಕ್ತರು ಭಾಗವಹಿಸಿದ್ದರು.. ಕಾರ್ಯಕ್ರಮದಲ್ಲಿ ಶ್ರೀ ಅನಂತ ಚಿಂಚಣಿ, ರಾಕೇಶ್ ದೇಶಪಾಂಡೆ, ವಿಲಾಸ್ ಬದಾಮಿ, ಮಾಲ್ತೇಶ್ ಪಾಟೀಲ, ಉದಯ ದೇಶಪಾಂಡೆ, ವಿದ್ಯಾ ದೇಶಪಾಂಡೆ. ವಿಕಾಸ್ ತೆರಣಿಕರ ಮತ್ತು ಕಾರ್ಯಕಾರಣಿ ಮಂಡಳಿಯ ಎಲ್ಲಾ ಸದಸ್ಯರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.