ಎಸ್‌ಜಿಬಿಐಟಿ ಎನ್‌ಎಸ್‌ಎಸ್ ಘಟಕ ಮತ್ತು ಅಂತರ್ಯಾಮಿ ಫೌಂಡೇಶನ್ ನಡುವೆ ಒಪ್ಪಂದ 

Murugesh Shivapuji
ಎಸ್‌ಜಿಬಿಐಟಿ ಎನ್‌ಎಸ್‌ಎಸ್ ಘಟಕ ಮತ್ತು ಅಂತರ್ಯಾಮಿ ಫೌಂಡೇಶನ್ ನಡುವೆ ಒಪ್ಪಂದ 
WhatsApp Group Join Now
ಬೆಳಗಾವಿ, ಸೆ.2 :ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ (SGBIT), ಬೆಳಗಾವಿಯ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕವು, ಸಮಾಜಮುಖಿ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಉದ್ದೇಶದಿಂದ, ಅಂತರ್ಯಾಮಿ ಫೌಂಡೇಶನ್, ಬೆಳಗಾವಿಯೊಂದಿಗೆ ವಡಂಬಡಿಕೆ ಒಪ್ಪಂದ (MoU) ಸಹಿ ಮಾಡಿದಾಗಿದೆ.
ಈ ಒಪ್ಪಂದ ಸಹಿಯು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನೆರವೇರಿದ್ದು ಕಾರ್ಯಕ್ರಮದಲ್ಲಿ ಎಸ್‌ಜಿಬಿಐಟಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಎಫ್. ವಿ. ಮಾನ್ವಿ, ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ, ಅಂತರ್ಯಾಮಿ ಫೌಂಡೇಶನ್‌ನ ಅಧ್ಯಕ್ಷ ಶ್ರೀ ನಾಗರಾಜ ಗಸ್ತಿ, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀ ಮಂಜುನಾಥ ಶರಣಪ್ಪನವರ ಉಪಸ್ಥಿತರಿದ್ದರು.
ಈ ಒಪ್ಪಂದದ ಮೂಲಕ ಎಸ್‌ಜಿಬಿಐಟಿ ವಿದ್ಯಾರ್ಥಿಗಳಿಗೆ ನೈಜ ಜೀವನ ಕೌಶಲ್ಯ, ಸಮಾಜ ಸೇವೆ, ಆರೋಗ್ಯ ಜಾಗೃತಿ, ಪರಿಸರ ಸಂರಕ್ಷಣೆ, ಸ್ವಚ್ಛತಾ ಅಭಿಯಾನ, ಗ್ರಾಮಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದ್ದು, ಅಂತರ್ಯಾಮಿ ಫೌಂಡೇಶನ್‌ನ ಅನುಭವದ ಜತೆಗೆ ವಿದ್ಯಾರ್ಥಿಗಳ ಉತ್ಸಾಹವನ್ನು ಒಗ್ಗೂಡಿಸುವ ಉದ್ದೇಶ ಇದಾಗಿದೆ.
ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಡಾ. ಎಫ್. ವಿ. ಮಾನ್ವಿ ಅವರು ಕಾಲೇಜು ಹಾಗೂ ಎನ್‌ಎಸ್‌ಎಸ್ ಘಟಕದ ಈ ಹೊಸ ಹೆಜ್ಜೆಯನ್ನು ಪ್ರಶಂಸಿಸಿ, ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.
ಪ್ರಾಚಾರ್ಯರಾದ ಡಾ. ಬಿ. ಆರ್. ಪಟಗುಂದಿ ಅವರು ಅಂತರ್ಯಾಮಿ ಫೌಂಡೇಶನ್‌ನೊಂದಿಗೆ ಇರುವ ಈ ಸಹಕಾರವು ಮಹತ್ತ್ವಪೂರ್ಣವಾದದ್ದು ಮತ್ತು ಪರಿಣಾಮಕಾರಿ ಇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಂತರ್ಯಾಮಿ ಫೌಂಡೇಶನ್ ಅಧ್ಯಕ್ಷರಾದ ಶ್ರೀ ನಾಗರಾಜ ಗಸ್ತಿ ಅವರು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವ  ಹುಮ್ಮಸ್ಸನ್ನ ವ್ಯಕ್ತಪಡಿಸಿದರು.
ಕಾರ್ಯಕ್ರಮಾಧಿಕಾರಿ ಪ್ರೊ. ಮಂಜುನಾಥ ಶರಣಪ್ಪನವರ ಅವರು NSS ಘಟಕದ ಈಗಿನ ಚಟುವಟಿಕೆಗಳ ಕುರಿತಾಗಿ ಮಾಹಿತಿ ನೀಡಿದರು ಮತ್ತು ಈ ಒಪ್ಪಂದದ ಮೌಲ್ಯವನ್ನು ವಿವರಿಸಿದರು.
WhatsApp Group Join Now
Telegram Group Join Now
Share This Article
error: Content is protected !!