This is the title of the web page
This is the title of the web page

Please assign a menu to the primary menu location under menu

Local News

ಸೋಯಾ ಬೆಳೆ ರಕ್ಷಣೆಗೆ ಕೀಟನಾಶಕ: ಕೃಷಿ ಅಧಿಕಾರಿ ಸೂಚನೆ


ಬೆಳಗಾವಿ,ಜುಲೈ: ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಪ್ರಮುಖ ಎಣ್ಣೆಕಾಳು ಬೆಳೆಯಾದ ಸೋಯಾ ಅವರೆ ಬಿತ್ತನೆಯಿಂದ ಒಂದು ತಿಂಗಳ ಬೆಳೆಯು ವಿವಿಧ ಹಂತದಲ್ಲಿದೆ. ಅಲ್ಲಲ್ಲಿ ಬೆಳೆಗೆ ಕಾಂಡ ಕೊರೆಯುವ ನೊಣದ ಬಾಧೆಯಿದ್ದು ಇದರಿಂದ ಕುಡಿ ಎಲೆಗಳು ಒಣಗುವ ಲಕ್ಷಣ ಕಂಡು ಬಂದಿದೆ, ಗಿಡವನ್ನು ಸೀಳಿದಾಗ ಕಾಂಡದ ಬಿಳಿಭಾಗ ಕಪ್ಪಾಗಿರುವದು ಕಂಡು ಬರುತ್ತದೆ. ಈ ಕೀಟದ ನಿಯಂತ್ರಣಕ್ಕಾಗಿ ೦.೨ ಮಿಲೀ ಇಮಿಡಾಕ್ಲೋಪ್ರಿಡ್ ೧೭.೮ ಎಸ್.ಎಲ್ ಅಥವಾ ೦.೩ ಗ್ರಾಂ ಥೈಯೊಮಿಥಾಕ್ಸಾಮ್ ೨೫ ಡಬ್ಲೂ ಜಿ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ಸೋಯಾ ಅವರೆ ಬೆಳೆಗೆ ತುದಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂಜಾಣು ರೋಗವು ಕಂಡು ಬರುತ್ತಿದ್ದು ಈ ರೋಗವು ಕಂಡ ತಕ್ಷಣ ಭಾದಿತ ಗಿಡಗಳನ್ನು ಕಿತ್ತ್ತಿ ಸುಡಬೇಕು ಮತ್ತು ಈ ರೋಗ ವೃದ್ಧಿಯಾಗಲು ಕಾರಣವಾಗುವ ಬಿಳಿನೊಣ/ಹಸಿರುಜಿಗಿ/ ಥ್ರೀಪ್ಸ ಕೀಟಗಳ ನಿಯಂತ್ರಣಕ್ಕಾಗಿ ೧.೫ ಮಿ.ಲೀ ಆಕ್ಸಿಡೆಮೆಟಾನ ಮಿಥೈಲ್ ೨೫ ಇ.ಸಿ ಅಥವಾ ೧.೫ ಮಿ.ಲೀ ಟ್ರೆöÊಜೋಪಾಸ್ ೪೦ ಇ.ಸಿ ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಸೋಯಾ ಅವರೆೆ ಬಿತ್ತುವ ರೈತರು ಪ್ರತಿ ಕಿ.ಗ್ರಾಂ ಬೀಜಕ್ಕೆ ೩.೦ ಗ್ರಾಂ ಥೈರಾಮ್ ೭೫ ಡಬ್ಲೂ ಪಿ ಅಥವಾ ೨.೦ ಗ್ರಾಂ ಕಾರ್ಬಾಕ್ಸಿನ್ ೭೫ ಡಬ್ಲೂ.ಪಿ ನಿಂದ ಬೀಜೋಪಚಾರ ಮಾಡಬೇಕು. ಹಾಗೂ ಬೆಳೆಯು ೩೦ ದಿನಗಳಿದ್ದಾಗಿನಿಂದ ಎಲೆಯ ಮೇಲೆ ತುಕ್ಕು/ಬಂಡಾರ ರೋಗದ ಭಾದೆಯ ಲಕ್ಷಣಗಳನ್ನು ವೀಕ್ಷಿಸಬೇಕು ಮತ್ತು ಮುಂಜಾಗ್ರತೆಯಾಗಿ ಪ್ರತಿ ಲೀಟರ್ ನೀರಿಗೆ ಶಿಲೀಂದ್ರನಾಶಕ ೧ ಮೀ.ಲಿ ಪ್ರೋಪಿಕೋನಾಜೋಲ್ ೨೫ ಇ.ಸಿ ಅಥವಾ ೧೦ ಮೀ.ಲಿ ಬೇವಿನ ಎಣ್ಣೆ ಬೆರೆಸಿ ಸಿಂಪಡಿಸಬೇಕು. ರೋಗದ ತೀವೃತೆಗನುಗುಣವಾಗಿ ೧೫ ದಿನಗಳ ಅಂತರದಲ್ಲಿ ಮತ್ತೊಮ್ಮೆ ಶಿಲೀಂದ್ರನಾಶಕ ಸಿಂಪಡಿಸಿರಿ. ಈ ರೀತಿ ನಿರ್ವಹಣಾ ಕ್ರಮಗಳನ್ನು ಬಾಧೆಯ ಲಕ್ಷಣ ಕಂಡ ತಕ್ಷಣ ಕೈಗೊಂಡು ರೈತರು ಬೆಳೆಯನ್ನು ರಕ್ಷಿಸಿಕೊಳ್ಳಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಬಹದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply