ಬೆಳಗಾವಿ :- ದೇಶಕ್ಕೆ ಸ್ವಾತಂತ್ರö್ಯ ಸಿಗುವಲ್ಲಿ ನಾಟಕದ ಪಾತ್ರ ಬಹು ಮುಖ್ಯವಾಗಿದೆ. ಸ್ವಾತಂತ್ರö್ಯ ಪೂರ್ವದಲ್ಲಿ ಹೆಚ್ಚು ಜನ ಅನಕ್ಷರಸ್ತಗಿದ್ದರು. ಜನರಲ್ಲಿ ದೇಶದ ಅಭಿಮಾನ ಮೂಡಿಸುವುದು, ದೇಶದ ಸ್ವಾತಂತ್ರö್ಯದ ಅವಶ್ಯಕತೆ ಕುರಿತು ತಿಳಿಸಿಕೊಡುವುದು ಅಷ್ಟೇ ಅಲ್ಲದೇ ಎಲ್ಲರಲ್ಲಿ ಒಗ್ಗಟ್ಟನ್ನು ಮೂಡಿಸುವುದು ಕಷ್ಟದ ಕೆಲಸವಾಗಿತ್ತು. ಈ ಎಲ್ಲ ಕೆಲಸವನ್ನು ಮಾಡುವಲ್ಲಿ ನಾಟಕ ಪ್ರಮುಖ ಪಾತ್ರ ವಹಿಸಿತು ಎಂದು ಬೆಳಗಾವಿಯ ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಬಾಗಾಧಿಕಾರಿ ಅಜಿತ ವಾರಕರಿ ಇಂದಿಲ್ಲಿ ಹೇಳಿದರು.
ರಂಗಸಂಪದದವರು ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ದಿ. ಶಿವಕುಮಾರ ಸಂಬರಗಿಮಠ ನಾಟಕೋತ್ಸವ, ರಂಗಸಖ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ತಿಲಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಜಿತ ವಾರಕರಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಕೊನೆ ದಿನವಾದ ಇಂದು ಬೆಂಗಳೂರಿನ ರಂಗಪಯಣ ಇವರಿಂದ ಫೂಲನದೇವಿ ಜೀವನ ಆಧಾರಿತ ನಾಟಕ ‘ಫೂಲನ ದೇವಿ’ ಪ್ರದರ್ಶನಗೊಂಡಿತು. ರಂಗರೂಪ, ವಿನ್ಯಾಸ, ನಿರ್ದೇಶನ ರಾಜಗುರು ಹೊಸಕೋಟೆ ಇವರದಾಗಿತ್ತು. ಫೂಲನ ದೇವಿ ಕಾಣಿಸಿಕೊಂಡ ಕಲಾವಿದೆ ನೈನಾ ಅವರ ಅಭಿನಯ ಅದ್ಭುತವಾಗಿತ್ತು.
ರಂಗಸಖ-೨೦೨೩ ಪ್ರಶಸ್ತಿಯನ್ನು ಧಾರವಾಡದ ಅಭಿನಯ ಭಾರತಿ ಅಧ್ಯಕ್ಷರಾದ ಶ್ರೀ ಅರವಿಂದ ಕುಲಕರ್ಣಿಯವರಿಗೆ ಹಾಗೂ ರಂಗಸಂಪದದ ಹಿರಿಯ ಕಲಾವಿದರಾದ ರಮೇಶ ಅನಿಗಳ ಹಾಗೂ ಗಂಗಾಧರ ಬೆನ್ನೂರ ಇವರಿಗೆ ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಫ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಗಂಗಾಧರ ಬೆನ್ನೂರ ಮಾತನಾಡುತ್ತ, ರಂಗಭೂಮಿಯವರದ್ದು ಮಾತು ಕಡಿಮೆ ಕೃತಿ ಹೆಚ್ಚು ಅಂದರೆ ನಾಟಕ ಮಾಡಿ ತೋರಿಸುವವರು. ರಂಗಭೂಮಿಯಲ್ಲಿ ನನಗೊಂದು ರೂಪ ಕೊಟ್ಟವರೆಂದರೆ ರಂಗಸಂಪದ ತಂಡ ಅದರಲ್ಲೂ ವಿಶೇಷವಾಗಿ ಶ್ರೀಪತಿ ಮಂಜನಬೈಲು ಅವರು. ನನ್ನ ನಿವೃತ್ತಿ ನಂತರದ ಜೀವನವನ್ನು ಈ ರಂಗಸಂಪದದ ಕೆಲಸಗಳಿಗೆ ಮುಡಿಪಾಗಿರುವೆ. ಮೊದಲಿಗಿಂತಲೂ ಹೆಚ್ಚು ಕ್ರಿಯಾಶೀಲನಾಗಿ ರಂಗಸಂಪದದಲ್ಲಿ ಪಾಲ್ಗೊಳ್ಳುವೆ ಎಂದು ಹೇಳಿದರು.
ಅರವಿಂದ ಕುಲಕರ್ಣಿ, ಶ್ರೀಪತಿ ಮಂಜನಬೈಲು, ಶ್ರೀಮತಿ ವಿಜಯಲಕ್ಷ್ಮೀ ಸಂಬರಗಿಮಠ ಮಾತನಾಡಿದರು.
ವಿಶ್ವ ರಂಗಭೂಮಿ ದಿನಾಚರಣೆ ಸಂದೇಶವನ್ನು ಡಾ. ಎ.ಎಲ್. ಕುಲಕರ್ಣಿ ವಾಚಿಸಿದರು. ಪದ್ಮಾ ಕುಲಕರ್ಣಿ ಹಾಗೂ ಅಶೋಕ ಕುಲಕರ್ಣಿ ಪರಿಚಯಿಸಿದರು. ಪ್ರಸಾದ ಕಾರಜೋಳ ಸ್ವಾಗತಿಸಿದರು. ಗುರುನಾಥ ಕುಲಕರ್ಣಿ ವಂದಿಸಿದರು. ವೀಣಾ ಪಾಟೀಲ(ಹೆಗಡೆ) ನಿರೂಪಿಸಿದರು.
Gadi Kannadiga > Local News > ದೇಶಕ್ಕೆ ಸ್ವಾತಂತ್ರö್ಯ ಸಿಗುವಲ್ಲಿ ನಾಟಕದ ಪಾತ್ರ ಬಹು ಮುಖ್ಯವಾಗಿತ್ತು : ಅಜಿತ ವಾರಕರಿ
ದೇಶಕ್ಕೆ ಸ್ವಾತಂತ್ರö್ಯ ಸಿಗುವಲ್ಲಿ ನಾಟಕದ ಪಾತ್ರ ಬಹು ಮುಖ್ಯವಾಗಿತ್ತು : ಅಜಿತ ವಾರಕರಿ
Suresh28/03/2023
posted on
