This is the title of the web page
This is the title of the web page

Please assign a menu to the primary menu location under menu

State

16 ರಂದು ಅಕ್ಕಮಹಾದೇವಿ ಜಯಂತಿ “ಚಿದ್ ಬೆಳಗು” ಕಾರ್ಯಕ್ರಮ


ಬೆಳಗಾವಿ : ಇದೇ ರವಿವಾರ ದಿನಾಂಕ 16 ರಂದು ಬೆಳಗಾವಿ ಶಿವ ಬಸವ ನಗರದಲ್ಲಿರುವ ಎಸ್‌.ಜಿ. ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಸಭಾ ಗ್ರಹದಲ್ಲಿ ಅಕ್ಕಮಹಾದೇವಿ ಜಯಂತಿ “ಚಿದ್ ಬೆಳಗು” ಕಾರ್ಯಕ್ರಮ ಏರ್ಪಡಿಸಲಾಗಿದೆ.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠ ಹಾಗೂ ಅಕ್ಕನ ಬಳಗಗಳ ಒಕ್ಕೂಟ ದ ಸಂಯುಕ್ತ ಆಶ್ರಯದಲ್ಲಿ ಅಂದು ಮುಂಜಾನೆ 9:30 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ವಹಿಸಲಿದ್ದಾರೆ, ಸಾನಿಧ್ಯದಲ್ಲಿ ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ, ಅಧ್ಯಕ್ಷತೆಯನ್ನು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ. ಅಲ್ಲಮಪ್ರಭು ಸ್ವಾಮಿಗಳು ವಹಿಸಲಿದ್ದಾರೆ, ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಸ್ವಾಮಿಗಳಿಗೆ ಮತ್ತು ಕಾರಂಜಿ ಮಠದ ಕಿರಿಯ ಸ್ವಾಮೀಜಿ ಡಾ. ಶಿವಯೋಗಿ ದೇವರಿಗೆ ಇದೇ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ನೀಡಲಾಗುತ್ತಿದೆ, ಶ್ರೀಮತಿ ನೀಲಗಂಗಾ ಚರಂತಿಮಠ ರಚಿಸಿರುವ “ಮುಕ್ತಾಂಗನೆ” ಅಕ್ಕಮಹಾದೇವಿ ಕುರಿತ ಮಹಾಕಾವ್ಯ ಕುರಿತು ಹಿರಿಯ ಸಾಹಿತ್ಯ ವಿಮರ್ಶಕ ಡಾ. ಬಸವರಾಜ ಜಗಜಂಪಿ ಉಪನ್ಯಾಸ ನೀಡಲಿದ್ದಾರೆ, ಶ್ರೀಮತಿ ಜಯಶ್ರೀ ನಿರಾಕರಿ ಹಾಗೂ ಶ್ರೀಮತಿ ಜಯಶೀಲಾ ಬ್ಯಾಕೋಡ ಸಂಪಾದಕತ್ವದಲ್ಲಿ ರಚಿಸಿದ “ಧರೆಗಿಳಿದ ಶಿವಶರಣೆಯರು” ಕುರಿತು ಸಾಹಿತಿ ಡಾ.ಮೈತ್ರಾಯಿಣಿ ಗದಿಗೆಪ್ಪಗೌಡರ ಮಾತನಾಡಲಿದ್ದಾರೆ, ಅಂದು ಮುಂಜಾನೆ ಬೆಳಗಿನ 9-30 ಗಂಟೆಯಿಂದ 10:30 ಗಂಟೆಯವರೆಗೆ ಶ್ರೀಮತಿ ಗೀತಾ ಚಿದಾನಂದ ನಿರ್ವಹಣೆಯಲ್ಲಿ ಮಾರುತಿ ಬೀದಿ ಅಕ್ಕನ ಬಳಗ , ಪ್ರಭುದೇವ ಮಾತ್ರ ಮಂಡಳಿ, ಕಾರಂಜಿ ಮಠದ ಮಾತ್ರ ಮಂಡಳಿ, ಲಿಂಗಾಯಿತ ಮಹಿಳಾ ಸಮಾಜ, ಸ್ಪೂರ್ತಿ ಮಹಿಳಾ ಮಂಡಲ ಬೆಳಗಾವಿ, ಸದಸ್ಯರುಗಳಿಂದ ವಚನ ಗಾಯನ ಸ್ಪರ್ಧೆ ನಡೆಯಲಿದೆ.
ಶ್ರೀಮತಿ ಶೈಲಜಾ ಭಿಂಗೆ ಅವರು ಪ್ರಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಲಿದ್ದಾರೆ, ಮುಖ್ಯ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಭಾರತಿ ಮಠದ ಮತ್ತು ಶ್ರೀಮತಿ ಸುನಂದಾ ಎಮ್ಮಿ ಅವರುಗಳು ಮಾಡಲಿದ್ದಾರೆ. ವಚನಗಾಯನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆಯನ್ನು ಇದೇ ಸಂದರ್ಭದಲ್ಲಿ ಮಾಡಲಾಗುವುದು.


Leave a Reply