24 ರಂದು ಅಕ್ಕಮಹಾದೇವಿ ಜಯಂತಿ 

Murugesh Shivapuji
24 ರಂದು ಅಕ್ಕಮಹಾದೇವಿ ಜಯಂತಿ 
WhatsApp Group Join Now

ಬೆಳಗಾವಿ; ಶಿವಶರಣೆ ಅಕ್ಕಮಹಾದೇವಿ ಜಯಂತಿ ಉತ್ಸವವನ್ನು ಇದೇ 24 ರಂದು ಬೆಳಗಾವಿ ಜಿಲ್ಲಾ ಮಹಿಳಾ ಸಂಘಟನೆಗಳ ಒಕ್ಕೂಟ “ಧಾರಿಣಿ” ಬೆಳಗಾವಿ ಹಾಗೂ ಕನ್ನಡ ಭವನ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಗುತ್ತಿದೆ.

ಬೆಳಗಿನ 10:00ಗೆ ಬೆಳಗಾವಿ ರಾಮದೇವ ಹೊಟೇಲ ಹಿಂಭಾಗದಲ್ಲಿರುವ ಕನ್ನಡ ಭವನದಲ್ಲಿ ಆಚರಿಸಲ್ಪಡುವ ಕಾರ್ಯಕ್ರಮದ ಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಬೆಳಗಾವಿ ಕಾರಂಜಿ ಮಠದ ಶ್ರೀ. ಗುರುಸಿದ್ದ ಮಹಾಸ್ವಾಮಿಗಳು ಸಮ್ಮುಖದಲ್ಲಿ ಉಪಸ್ಥಿತರಿರಾಗಿದ್ದಾರೆ.
ಶ್ರೀಮತಿ. ಸಮತಾ ಹೊಸಪೇಟೆ ಅವರು “ಭವದ ಬೆಳಗು” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಶ್ರೀಮತಿ. ಶೈಲಜಾ ಭಿಂಗೆ, ಶ್ರೀಮತಿ. ಮಂಗಲಾ ಮೆಟಗುಡ್ಡ, ಶ್ರೀಮತಿ. ರತ್ನಪ್ರಭಾ ಬೆಲ್ಲದ ಇವರುಗಳಿಗೆ “ಧಾರಿಣಿ”ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಡಾ. ಗುರುದೇವಿ ಹುಲೆಪ್ಪನವರಮಠ ವಿರಚಿತ “ಮಾಸ್ಟರ್ ರಿನೌನ್ಸರ್” ಶ್ರೀಮತಿ.ಆಶಾ ಯಮಕನಮರಡಿ ವೀರಜಿತ “ಸಾಲು ಹನಿಗಳು” ಶ್ರೀಮತಿ ಸುಧಾ ಪಾಟೀಲ್ ವಿರಚಿತ “ಶರಣರ ನೆನೆದರ ಸರಗಿಯ ಇಟ್ಟಂಗ” ಮತ್ತು ಶ್ರೀಮತಿ ಪ್ರಭಾ ಪಾಟೀಲ್ ವಿರಚಿತ “ಕಾವ್ಯ ಪ್ರಭೆ ” ಪುಸ್ತಕಗಳ ಲೋಕಾರ್ಪ ಣೆಯಾಗಲಿದೆ. ಇದೇ ಸಂದರ್ಭದಲ್ಲಿ ಡಾ. ಮೈತ್ರಯಿಣಿ ಗದಿಗೆಪ್ಪಗೌಡರ, ಶ್ರೀಮತಿ. ಅನ್ನಪೂರ್ಣ ಸಿದ್ದನಗೌಡ ಪಾಟೀಲ ಇವರಿಗೆ ಗೌರವ ಸನ್ಮಾನ ನೀಡಲಾಗುತ್ತಿದೆ. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತ್ಯ ಶ್ರೀಮತಿ. ನೀಲಗಂಗಾ ಚಿರಂತಿಮಠ ವಹಿಸಲಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!