ಬೆಳಗಾವಿ: ಹಿಜಾಬ್ ವಿವಾದದ ವೇಳೆ ಮಂಡ್ಯದಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಮುಸ್ಲಿಂ ಯುವತಿ ಮುಸ್ಕಾನ್ ಳನ್ನು ಅಲ್ ಖೈದಾ ಉಗ್ರ ಸಂಘಟನೆ ಪ್ರಮುಖ ಜವಹರಿ ಹೊಗಳಿ ವಿಡಿಯೋ ತುಣುಕೊಂದನ್ನು ರವಾಣಿಸಿದ್ದು ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಇದರ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ಮಾಡಿದ ಅವರು ಮುಸ್ಕಾನ್ ಳನ್ನು ಅಲ್ ಖೈದಾ ಉಗ್ರ ಸಂಘಟನೆ ಪ್ರಮುಖ ಹೋಗಳಿರುವುದು ಅತ್ಯಂತ ಖಂಡನೀಯ. ಸರ್ಕಾರ ಇದನ್ನ ಹಗುರವಾಗಿ ತೆಗೆದುಕೊಳ್ಳಬಾರದು. ಬಿನ್ ಲಾಡೆನ್ ನಂತರ ಅಲ್ ಖೈದಾದ ಪ್ರಮುಖ ಜವಹರಿ ಬ್ಯಾನ್ ಆಗಿದ್ದಾನೆ. ಬ್ಯಾನ್ ಆದ ನಂತರ ಈ ವ್ಯಕ್ತಿಯ ವಿಡಿಯೋ ಎಲ್ಲಿಂದ ಬಂತು.? ಹೇಗೆ ಬಂತು.? ಅದು ಮಂಡ್ಯದ ಮುಸ್ಕಾನ್ವರೆಗೆ ಹೇಗೆ ಬಂತು..? ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.