This is the title of the web page
This is the title of the web page

Please assign a menu to the primary menu location under menu

Local News

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸ್ಕೇಟಿಂಗ್ ಚಾಂಪಿಯನ್‌ಶಿಪ್ ೨೦೨೨: ಅಭಿಷೇಕ್ ನವಲೆಗೆ ಚಿನ್ನದ ಪದಕ


ಬೆಳಗಾವಿ,ಜುಲೈ೦೫: ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಆಂಧ್ರ ಯೂನಿವರ್ಸಿಟಿ ವಿಶಾಖಪಟ್ಟಣಂ ಆಯೋಜಿಸಿದ್ದ ಜೂನ್ ೩೦ ರಿಂದ ಜುಲೈ ೩ ರವರೆಗೆ ನಡೆದ ಅಖಿಲ ಭಾರತ ಇಂಟರ್ ಯೂನಿವರ್ಸಿಟಿ ರೋಲರ್ ಸ್ಪೋರ್ಟ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ೨೦೨೨ ರಲ್ಲಿ ಬೆಳಗಾವಿ ಸ್ಕೇಟರ್ ಅಭಿಷೇಕ್ ನವಲೆ ಚಿನ್ನದ ಪದಕ ಗೆದ್ದು ಮಿಂಚಿದ್ದಾರೆ.
ಆಂಧ್ರ ವಿಶಾಖಪಟ್ಟಣಂನ ವುಡಾ ಪಾರ್ಕ್ನಲ್ಲಿ ಜೂನ್ ೩೦ರಿಂದ ಜುಲೈ ೩ರವರೆಗೆ ಈ ಚಾಂಪಿಯನ್‌ಶಿಪ್ ನಡೆಯಿತು.ಈ ಚಾಂಪಿಯನ್‌ಶಿಪ್‌ನಲ್ಲಿ ಸುಮಾರು ೬೦೦ ಸ್ಕೇಟರ್‌ಗಳು ಭಾಗವಹಿಸಿದ್ದರು. ಬೆಳಗಾವಿಯ ಅಭಿಷೇಕ್ ನವಲೆ ಇನ್‌ಲೈನ್ ಸ್ಪೀಡ್ ಸ್ಲಾಲೋಮ್ ೧ ಚಿನ್ನ ಪದಕ ಗೆದ್ದಿದ್ದಾರೆ. ಅಭಿಷೇಕ್ ಕಳೆದ ೧೬ ವರ್ಷಗಳಿಂದ ಅಂತಾರಾಷ್ಟ್ರೀಯ ಸ್ಕೇಟರ್‌ಗಳು ಮತ್ತು ಎರಡು ಬಾರಿ ಗಿನ್ನೆಸ್ ವಿಶ್ವ ದಾಖಲೆ ಹೊಂದಿರುವ ಮಹಾತ್ಮ ಗಾಂಧಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಾಡಗಡದ ಅಧ್ಯಯನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ತಂದೆ ಸಂಜಯ ನವಲೆ ಓWಏಖಖಿಅ ಬಸ್ ಕಂಡಕ್ಟರ್ ಕೆಲಸ. ತಾಯಿ ಸುಜಾತಾ ನವಲೆ ಗೃಹಿಣಿ. ಕೆ.ಎಲ್.ಇ ಸಮಾಜದ ಸ್ಕೇಟಿಂಗ್ ರಿಂಕ್ ರೋಟರಿ ಕಾರ್ಪೊರೇಷನ್ ಕ್ರೀಡಾ ಅಕಾಡೆಮಿ ಸ್ಕೇಟಿಂಗ್ ರಿಂಕ್, ಗುಡ್ ಶೆಫರ್ಡ್ ಸೆಂಟ್ರಲ್ ಸ್ಕೂಲ್ ಇಂಟರ್ನ್ಯಾಷನಲ್ ಸ್ಕೇಟಿಂಗ್ ಟ್ರ‍್ಯಾಕ್ ಮತ್ತು ಅವರ ಪ್ರೋತ್ಸಾಹವನ್ನು ಡಾ. ಪ್ರಭಾಕರ ಕೋರೆ, ಶಾಮ್ ಘಾಟಗೆ ಮಾಜಿ ಶಾಸಕ ಕುಡಚಿ, ರಾಜ್ ಘಾಟಗೆ, ಇಂದೂಧರ್ ಸೀತಾರ್ಮ್ ಪ್ರಧಾನ ಕಾರ್ಯದರ್ಶಿ ಕೆ.ಆರ್.ಎಸ್.ಎ. ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಅಧ್ಯಕ್ಷರಾದ ಉಮೇಶ ಕಲ್ಘಟಗಿ, ಪ್ರಸಾದ್ ತೆಂಡೂಲ್ಕರ್, ದೈಹಿಕ ಶಿಕ್ಷಕ ಜಗದೀಶ ಗಸ್ತಿ. ಪ್ರಾಚಾರ್ಯ ಸರ್ ಜಗದೀಶ ಎಸ್ ಜೋಡಂಗಿ, ಎಸ್ ವಿ ಪಾಟೀಲ್ ಸರ್, ಪಿಇ ಶಿಕ್ಷಕ ಕೆ ವಿ ಪಾಟೀಲ್ ಸರ್. ಸಿ ಎಸ್ ಬೀಡ್ನಾಳ್ ಸರ್ ಸ್ಕೇಟಿಂಗ್ ತರಬೇತುದಾರ ಸೂರ್ಯಕಾಂತ ಹಿಂಡಲಗೇಕರ, ಯೋಗೀಶ್ ಕುಲಕರ್ಣಿ, ಮಂಜುನಾಥ ಮಂಡೋಳ್ಕರ್, ವಿಠ್ಠಲ್ ಗಗನೆ, ಸಕ್ಷಮ್ ಜಾಧವ್ ಅವರ ಮಾರ್ಗದರ್ಶನದಲ್ಲಿ ಅಭಿಷೇಕ್ ಈ ಸಾಧನೆ ಮಾಡಿದ್ದಾರೆ. ಎಂದು ಬೆಳಗಾವಿ ಜಿಲ್ಲಾ ಲೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply