ಗಡಿ ಕನ್ನಡಿಗ
ಖಾನಾಪುರ: ಸದಾ ಹಸನ್ಮುಖಿ ಯಾರೇ ಬಂದರೂ ನಗುತ್ತಾ ಮಾಡನಾಡುವ ಎಲ್ಲರಿಗೂ ಆಪೇಕ್ಷ ಭಾವನೆ ಇಲ್ಲದೆ ಸಹಾಯ ಮಾಡುವ ನಿಸ್ವಾರ್ತಿ ಸರಕಾರಿ ಹುದ್ದೆಯಲ್ಲಿದ್ದರೂ ಎಂದಿಗೂ ಅದರ ಗರ್ವ ತೋರದ ಸಮಾಜ ಸೇವಕ ಎಂದೇ ಕರೆಸಿಕೊಳ್ಳುತ್ತಿದ್ದ ಕಲ್ಲಪ್ಪ ಕೋಲಕಾರ ಇನ್ನಿಲ್ಲ.
ದೇವರು ಒಳ್ಳೆಯವರನ್ನ ಬೇಗ ಕರೆಸಿಕೊಳ್ಳುತ್ತಾನೆ ಎನ್ನುವದಕ್ಕೆ ಮತ್ತೊಂದು ಉದಾಹರಣೆ ಎಂದರೆ ತಪ್ಪಾಗಲಿಕ್ಕಿಲ್ಲ ಸರಕಾರಿ ಹುದ್ದೆ ಸಿಕ್ಕರೆ ಸಾಕು ಬೇಕಾದಷ್ಟು ಆಸ್ತಿ ಪಾಸ್ತಿ ಮಾಡುವ ಅಧಿಕಾರಿಗಳ ಮಧ್ಯೆ ಕಲ್ಲಪ್ಪ ಕೋಲಕಾರ ಅವರು ಖಾನಾಪುರ ತಹಶಿಲ್ದಾರ ಕಚೇರಿಯಲ್ಲಿ ಶಿರಸ್ತೆದಾರ ಆಗಿ ಹಲವು ವರ್ಷ ಸೇವ ಸಲ್ಲಿಸಿದರೂ ಇನ್ನೂ ವಾಸವಿದ್ದದ್ದೂ ಬಾಡಿಗೆ ಮನೆಯಲ್ಲೇ.
ಇವತ್ತಿಗೂ ಎಂತವರೇ ಕಷ್ಟ ಇದೆ ಅಂತ ಬಂದರೂ ತಮ್ಮ ಕೈಲಾದ ಸಹಾಯ ಮಾಡುವದನ್ನ ಮರೆಯದ ಕಲ್ಲಪ್ಪಣ್ಣಾ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಯಾವುದೇ ಜಯಂತಿ ಬರಲಿ ಹಬ್ಬಗಳೇ ಬರಲಿ ಕಚೇರಿಯನ್ನ ಸಿಂಗರಿಸುವದರಿಂದ ಹಿಡಿದು ಕಾರ್ಯಕ್ರಮ ಯಶಸ್ವಿಗೊಳಿಸಿವದರ ವರೆಗೂ ಕಚೇರಿ ಬಿಟ್ಡು ಅಲ್ಲಾಡುತ್ತಿರಲಿಲ್ಲ ಆದರೂ ಅಂತಹ ಒಳ್ಳೆಯವರನ್ನ ದೇವರು ಇಷ್ಟು ಬೇಗ ಕರೆದಕೊಳ್ಳಬಾರದಿತ್ತು ಮೃತರು ಇಬ್ಬರು ಮಕ್ಕಳು ಮಡದಿಯನ್ನ ಅಗಲಿದ್ದು ತಾಲೂಕಿನ ಹಾಗೂ ತಹಶಿಲ್ದಾರ ಕಚೇರಿ ಸಿಬ್ಬಂದಿ ಕಂಬಣಿ ಮಿಡಿದಿದ್ದಾರೆ.