This is the title of the web page
This is the title of the web page

Please assign a menu to the primary menu location under menu

State

ಪಡಿತರ ಚೀಟಿಗಳ ಸದಸ್ಯರ ಇ-ಕೆವೈಸಿಗೆ ಅವಕಾಶ


ಗದಗ ಸೆಪ್ಟೆಂಬರ್ ೨೬: ಜಿಲ್ಲೆಯಲ್ಲಿ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಇ- ಕೆವೈಸಿ ಮಾಡಬಹುದಾಗಿದ್ದು, ಹಾಗೂ ಸೆಪ್ಟೆಂಬರ್ -೨೦೨೨ ಪೂರ್ತಿ ತಿಂಗಳವರೆಗೆ ಇ- ಕೆ ವೈಸಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಬೆಳಿಗ್ಗೆ ೭ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ವೆಬ್‌ಸೈಟ್ ಲಭ್ಯವಿದ್ದು , ಎಲ್ಲ ನ್ಯಾಯ ಬೆಳೆ ಅಂಗಡಿಕರರು ಅಂಗಡಿ ತೆರೆದು ನಿಮ್ಮಲ್ಲಿ ಪಡಿತರ ಪಡೆಯುವ ಪಡಿತರ ಚೀಟಿದಾರರ ಇ- ಕೆವೈಸಿ ಸ್ಟೇಟ್‌ಸ್‌ನ್ನು hಣಣಠಿs://ಚಿhಚಿಡಿಚಿ.ಞಚಿಡಿ.ಟಿiಛಿ.iಟಿ/ಟಠಿg/ ವೆಬ್‌ಸೈಟ್‌ನಲ್ಲಿಪರಿಶೀಲಿಸಿ ಇ-ಕೆವೈಸಿ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರ ಇ–ಕೈವೈಸಿ ಕಡ್ಡಾಯವಾಗಿ ಮಾಡಿ ಪಡಿತರ ವಿತರಿಸಬೇಕು. ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರು ಊರಲ್ಲಿ ಇಲ್ಲದೇ ಇದ್ದ ಪಕ್ಷದಲ್ಲಿ , ಪಡಿತರ ಚೀಟಿಯ ಸಂಖ್ಯೆ , ಸಿಲೆಂಡರ್ ಬುಕಿಂಗ್ ಪುಸ್ತಕದೊಂದಿಗೆ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆ , ತಾಲೂಕು ಗ್ರಾಮದಲ್ಲಿರುವ ನ್ಯಾಯಬೆಲೆ ಅಂಡಿಗಳಲ್ಲಿ ಇ- ಕೆ ವೈಸಿ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Gadi Kannadiga

Leave a Reply