This is the title of the web page
This is the title of the web page

Please assign a menu to the primary menu location under menu

State

ಪರ್ಯಾಯ ಕನ್ನಡ ಚಲನಚಿತ್ರದ ಟ್ರೇಲರ್ ಬಿಡುಗಡೆ


ವಿಜಯಪುರ: ಮಮತಾ ಕ್ರಿಯೇಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಕನ್ನಡ ಚಲನಚಿತ್ರ ಪರ್ಯಾಯ, ಮೂರು ವ್ಯಕ್ತಿಗಳು ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಹುಡುಕಿಕೊಂಡು ಹೋಗುವ ಪರ್ಯಾಯ ಮಾರ್ಗಗಳು ಅದರಿಂದ ಅಗುವ ಘಟನೆಗಳ ಸುತ್ತ ಪರ್ಯಾಯ ಕತೆ ಸಾಗುತ್ತದೆ, ಹೊಸ ಕಲಾವಿದರ ಒಂದು ವಿನೂತನ ಪ್ರಯೋಗದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಲಿರುವ ಪರ್ಯಾಯ ವಾಸ್ತವ ನೆಲೆಗಟ್ಟಿನಲ್ಲಿ ಒಂದು ಉತ್ತಮ ಅಂಶವನ್ನು ಇಟ್ಟುಕೊಂಡು ಸಪ್ಟೆಂಬರ್ ಎಂಟರಂದು ತೆರೆಗೆ ಬರಲಿದೆ ಎಂದು ನಿರ್ದೇಶಕ ರಮಾನಂದ ಮಿತ್ರ ಹೇಳಿದರು.
ಅವರು ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಕನ್ನಡ ಚಲನಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಎಲ್ಲವೂ ಉತ್ತಮ ಸಂದೇಶ ನೀಡುವ ಹಾಡುಗಳಾಗಿವೆ, ಅಜಯ್ ವಾರಿಯರ್, ನಾದಿರಾ ಬಾನು, ಮೆಹಬೂಬ್ ಸಾಬ್, ಲೆಮನ್ ಪರಶುರಾಮ್ ಹಾಡಿದ್ದಾರೆ.
ರಾಜಕುಮಾರ್, ಶ್ರೀಮತಿ ಇಂದುಮತಿ ರಾಜಕುಮಾರ್ ನಿರ್ಮಾಪಕರಾಗಿದ್ದಾರೆ. ಮುರುಗೇಶ್ ಬಿ ಶಿವಪೂಜೆ, ಶಿವಾನಂದ ಚಿಕ್ಕಮಠ ಸಹ ನಿರ್ಮಾಪಕರಾಗಿದ್ದಾರೆ. ರವೀಶ್ ರಾಮ್ ಸಂಗೀತ ನೀಡಿದ್ದಾರೆ. ಜಿ. ರಂಗಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ. ಜೀವನ್ ಪ್ರಕಾಶ್ ಸಂಕಲನ ಮಾಡಿದ್ದಾರೆ. ಮೂರ್ತಿ ನಿಡುವಳ್ಳಿ ಪ್ರಸಾದನ ಸೇವೆ ನೀಡಿದ್ದಾರೆ.
ಈ ಚಿತ್ರದಲ್ಲಿ ರಾಜಕುಮಾರ್, ಮುರುಗೇಶ್ ಬಿ ಶಿವಪೂಜಿ, ರಂಜನ್ ಕುಮಾರ್, ಜಯಂತಿ ರೇವಡಿ, ಅರ್ಚನಾ ಶೆಟ್ಟಿ, ಪ್ರಿಯಾ ಕೊಠಾರಿ, ಭೀಮ ನಾಯಕ್, ಬೆಳಗಾವಿ ಕಟ್ಟಪ್ಪ, ದಿನೇಶ್ ಖಾಂಡ್ಯ, ಸುರೇಶ್ ಬೆಳಗಾವಿ, ಕಂಪರಾಜ್ ಇತರರು ಅಭಿನಯಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪರ್ಯಾಯ ಕನ್ನಡ ಚಲನಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಗರದ ಅಧ್ಯಕ್ಷರಾದ ಫಯಾಜ ಕಲಾದಗಿ, ಹಿರಿಯ ಪತ್ರಕರ್ತರಾದ ಪ್ರದೀಪ ಕುಲಕರ್ಣಿ ಉಪಸ್ಥಿತರಿದ್ದರು.


Leave a Reply